ಪುತ್ತೂರು ಕಾಂಗ್ರೆಸ್ ಚುನಾವಣೆಯಲ್ಲಿ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ, ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಪದಾಧಿಕಾರಿಯಾಗಿ ಹಲವಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರುವ ನಡುಕಟ್ಟ ದಿ. ಶಿವಾನಂದ ಮಣಿಯಾಣಿ ಯವರ ಎರಡನೇ ಸುಪುತ್ರ ವೃತ್ತಿಯಲ್ಲಿ ಶಿಕ್ಷನಾಗಿರುವ ಪ್ರವೃತ್ತಿಯಲ್ಲಿ ಸಾಮಾಜಿಕ ರಾಜಕೀಯ ವ್ಯಕ್ತಿತ್ವದ ಯುವ ನಾಯಕ ಉತ್ತಮ ವಾಗ್ಮಿ ಶ್ರೀಪ್ರಸಾದ್ ಎನ್ ಎಸ್* ಅವರು ಗೆಲುವು ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶವಾಗಿರುವ ಪಾಣಾಜೆಯಲ್ಲಿ ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್ ಮೂಲಕ ಯುವಕರನ್ನು ಸಂಘಟಿಸಿ ಸಮಾಜದ ಎಲ್ಲಾ ವರ್ಗದ ಜನರ ಸೇವೆಯ ಮೂಲಕ ಮನೆ ಮನ ಮುಟ್ಟಿದ ಯುವಕ. ಉತ್ತಮ ವಾಗ್ಮಿಯಾಗಿರುವ ಶ್ರೀಪ್ರಸಾದ್ ಎನ್ ಎಸ್*ಪಕ್ಷದ ಪ್ರಚಾರಕ್ಕಾಗಿ ಜಿಲ್ಲೆಯಾದ್ಯಂತ ತಿರುಗಾಟ ನಡೆಸಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ಥಳೀಯಾಡಳಿತ, ವಿಧಾನಸಭಾ,ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷದ ಪರ ನಿಷ್ಠೆ ತೋರಿ ನಿಸ್ವಾರ್ಥವಾಗಿ ಕೆಲಸವನ್ನು ಮಾಡಿದ ಅನುಭವ ಇವರಿಗಿದೆ. ಇವರಿಗೆ ಯುವಕರನ್ನು ಸಂಘಟಿಸಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುವ ಉತ್ಸಾಹವಿದೆ. ಯುವಕರ ಬಗ್ಗೆ ಕಾಳಜಿಯಿದೆ. ಜನರ ಕಷ್ಟಗಳನ್ನು ಪರಿಹರಿಸುವ ತುಡಿತವಿದೆ. ಜಾತ್ಯತೀತ ತತ್ವವನ್ನು ಸಂಪೂರ್ಣವಾಗಿ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಸರ್ವ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಬಹುಮತದಿಂದ ಪುತ್ತೂರು ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.ಕಾವು ಹೇಮನಾಥ ಶೆಟ್ಟಿ ಇವರ ಬೆಂಬಲದಿಂದ ಜಯಭೇರಿ ಸಾಧಿಸಿರುವುದು ಇವರ ಗೆಲುವಿಗೆ ಮತ್ತಷ್ಟು ಪುಷ್ಟಿ ನೀಡಿದೆ.