ಬೆಂಗಳೂರು: ಕಣ್ಣೂರು-ಬೆಂಗಳೂರು ಎಕ್ಸ್ಪ್ರೆಸ್ ರೈಲಿನ 5 ಬೋಗಿಗಳು ಇಂದು ಮುಂಜಾನೆ ಹಳಿ ತಪ್ಪಿದೆ.
ಇಂದು ಮುಂಜಾನೆ 3:50 ರ ಸುಮಾರಿಗೆ, ಕಣ್ಣೂರು-ಬೆಂಗಳೂರು ಎಕ್ಸ್ಪ್ರೆಸ್ ರೈಲು ತೊಪ್ಪೂರು – ಶಿವಾಡಿ ಬಳಿ ಚಲಿಸುತ್ತಿದ್ದ ವೇಳೆ ಹಠಾತ್ ಆಗಿ ಬಂಡೆಗಳು ಉರುಳಿ ಬಿದ್ದಿದೆ. ಹೀಗಾಗಿ ರೈಲಿನ 5 ಬೋಗಿಗಳು ಹಳಿ ತಪ್ಪಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರೈಲಿನಲ್ಲಿದ್ದ ಪ್ರಯಾಣಿಸುತ್ತಿದ್ದ 2,348 ಪ್ರಯಾಣಿಕರು ಸಹ ಸುರಕ್ಷಿತರಾಗಿದ್ದಾರೆ.
ಇದೀಗ ಅಪಘಾತ ಸ್ಥಳಕ್ಕೆ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಮತ್ತು ಸ್ಥಳೀಯ ಆಡಳಿತವು ಭೇಟಿ ನೀಡಿದೆ ಮತ್ತು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.