ಕೇರಳ: ದೇವರನಾಡು ಎಂದೇ ಖ್ಯಾತಿಗಳಿಸಿರುವ ಕೇರಳದಲ್ಲಿ ಇದೀಗ ಕೊರೊನಾ ತಣ್ಣಗಾಗಿರುವ ಹೊತ್ತಲ್ಲಿ ಹೊಸದೊಂದು ವೈರಸ್ ಪತ್ತೆಯಾಗಿ ಆತಂಕ ಸೃಷ್ಟಿಸಿದೆ.
ಹೌದು ಕೊರೊನಾ ಸೋಂಕಿನ ಜೊತೆಗೆ ಕೇರಳದಲ್ಲಿ ‘ನೊರೊವೈರಸ್’ ಎಂಬ ಹೊಸ ವೈರಸ್ನ ಕಾಟ ಶುರುವಾಗಿದೆ. ಎರಡು ವಾರಗಳ ಅಂತರದಲ್ಲಿ 13 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಅಂತಾ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ಏನಿದು ಸೋಂಕು..?
ನೊರೊವೈರಸ್, ಕಲುಷಿತ ನೀರು, ಆಹಾರ ಜೊತೆಗೆ ಪ್ರಾಣಿಗಳಿಂದ ಹರಡುವ ರೋಗ ಎನ್ನಲಾಗಿದೆ. ಕಳೆದ ವಾರದಲ್ಲಿ ವಯನಾಡ್ ಜಿಲ್ಲೆಯ ವೈತಿರಿ ಬಳಿಯ ಪೂಕೋಡ್ ನಲ್ಲಿರುವ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ಈ ಸೋಂಕು ದೃಢಪಟ್ಟಿದೆ. ಸದ್ಯ ಈ ರೋಗದ ಕುರಿತು ಹೋರಾಡಲು ಸ್ವಚ್ಛೆತೆಯನ್ನು ಕಾಪಾಡಿಕೊಳ್ಳುವಂತೆ ಕೇರಳ ಸರ್ಕಾರ ಮನವಿ ಮಾಡಿದೆ.
ಸೋಂಕಿನ ಲಕ್ಷಣಗಳೇನು..?
- ನೊರೊವೈರಸ್ ಸೋಂಕು ಜಠರ, ಕರುಳಿಗೆ ಹಾನಿ ಉಂಟುಮಾಡುತ್ತದೆ
- ಊಟ ಸೇವನೆಯ ನಂತರ ಹೊಟ್ಟೆ ಮತ್ತು ಕರುಳಿನ ಒಳಪದರದ ಉರಿಯೂತ, ತೀವ್ರ ವಾಂತಿ, ಅತಿಸಾರವನ್ನು ಉಂಟು ಮಾಡುತ್ತದೆ.
- ಕಲ್ಮಶ ಮಿಶ್ರಿತ ಕುಡಿಯುವ ನೀರಿನ ಮೂಲಕವೇ ಈ ವೈರಸ್ ಸೋಂಕು ಅತಿಯಾಗಿ ಹರಡುತ್ತದೆ ಎನ್ನಲಾಗಿದೆ.
- ನೊರೊವೈರಸ್ ಆರೋಗ್ಯವಂತ ಜನರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ, ಆದರೆ ಚಿಕ್ಕಮಕ್ಕಳು, ವಯಸ್ಸಾದವರು ಮತ್ತು ಇತರೆ ರೋಗಗಳಿರುವವರಲ್ಲಿ ಇದು ಗಂಭೀರವಾಗಿರಬಹುದು.
- ಪದೇ ಪದೇ ಅತಿಯಾದ ತಲೆನೋವು ಕಾಣಿಸಿಕೊಳ್ಳುಲು ಆರಂಭಿಸಿದ್ರೆ ನೊರೊವೈರಸ್ನ ಪ್ರಾಥಮಿಕ ಹಂತ ಕಾಣಿಸಿಕೊಂಡಂತೆ.