ವಿಟ್ಲ: ಸರಕಾರದ ಅನುಮತಿ ಪ್ರಕಾರ ಸ್ಥಾಪಿತವಾದ ‘ಗ್ರಂಥಾಲಯದ ಪುಸ್ತಕ ಗೂಡು’ ಇದರ ಉದ್ಘಾಟನೆಯನ್ನು ಕಾರ್ಪೋರೇಶನ್ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಈಶ್ವರ ಭಟ್ ರವರು ಪಡಿಬಾಗಿಲಿ ನಲ್ಲಿ ನೆರವೇರಿಸಿದರು.
ಇದರ ಕೊಡುಗೆಯನ್ನು ಡಿ.ಎಮ್. ಕ್ಲಬ್ ಮೆಂಬರ್ ಎಲ್.ಐ.ಸಿ. ಆಫ್ ಇಂಡಿಯಾ ಜಗಜೀವನ್ ರಾಮ್ ಶೆಟ್ಟಿ ರವರು ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಗಿರಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ, ಮುಖ್ಯ ಶಿಕ್ಷಕಿ ಶಶಿಕಲಾ, ಜಿನಚಂದ್ರ ಜೈನ್, ಸುಧಾಕರ ಬಡಕೋಡಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಉದಯ ಕುಮಾರ್,ಲಕ್ಷ್ಮೀ, ಐತಪ್ಪ ನಾಯ್ಕ್, ಅನ್ವಿತಾ ತಾರಾನಾಥ್ ಆಳ್ವ, ರಾಜೇಂದ್ರ ಕುಮಾರ್, ಆತ್ಮೀತ್ ರೈ, ದೀಕ್ಷಾ ಉಪಸ್ಥಿತರಿದ್ದರು. ಭವ್ಯ ಸ್ವಾಗತಿಸಿ, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ ಧನ್ಯವಾದಗೈದರು. ಜಗಜ್ಜೀವನ್ ರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.