ಪುತ್ತೂರು: ಆಪೆ ರಿಕ್ಷಾವೊಂದು ಪಲ್ಟಿಯಾದ ಘಟನೆ ಪುರುಷರಕಟ್ಟೆಯಿಂದ ಪಂಜಳಕ್ಕೆ ಹೋಗುವ ರಸ್ತೆಯಲ್ಲಿ ನಡೆದಿದೆ.
ಅಪಘಾತದಿಂದ ಚಾಲಕರಾದ ಕುಂಬ್ರ ರಾಧಾಕೃಷ್ಣ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಈ ರಸ್ತೆ ದುರಸ್ಥಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 7 ಕೋಟಿ ರೂ. ಜಾರಿಯಾಗಿದ್ದು, ಇಂಜಿನಿಯರ್ ಮತ್ತು ಗುತ್ತಿಗೆದಾರರ ನಿರ್ಲಕ್ಷತನದಿಂದ ರಸ್ತೆ ದುರಸ್ಥಿ ಕಾರ್ಯಾ ಇನ್ನು ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ತು ದಿವಸಗಳಲ್ಲಿ ದುರಸ್ಥಿ ಕಾರ್ಯ ಮಾಡುವುದಾಗಿ ತೆಂಗಿನ ಕಾಯಿ ಒಡೆದು ಹೋಗಿದ್ದು, ಇನ್ನೂ ಕೂಡ ಕಾರ್ಯಾರಂಭ ಮಾಡದೇ ಇದ್ದು, ರೀತಿಯಾಗಿ ಮುಂದುವರೆದರೆ ನ.16 ರಂದು ಇಂಜಿನಿಯರ್ ಜನಾರ್ಧನ್ ಮತ್ತು ಗುತ್ತಿಗೆದಾರ ಸತೀಶ್ ಪೂಜಾರಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.