ಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಾಲಯದಲ್ಲಿ ಡಿ. 21ರಿಂದ 26ರ ತನಕ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶದ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯು ನ.14 ರಂದು ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ವಿವಿಧ ಸಮಿತಿಗಳ ಪದಾಧಿಕಾರಿಗಳ ಜತೆಗೆ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಿದರು. ಸಭೆಯ ಸಲಹೆಯಂತೆ ನ. 21ರಂದು ಬೆಳಗ್ಗೆ 9 ಗಂಟೆಗೆ ಚಪ್ಪರ ಮುಹೂರ್ತ ಹಾಗೂ 10.30ಕ್ಕೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಚಪ್ಪರ ಮುಹೂರ್ತವು ಕೇಶವ ಭಂಡಾರಿ ಕೈಪ ಮತ್ತು ಗೋಪಾಲಕೃಷ್ಣ ಶೆಟ್ಟಿ ಕಳೆಂಜ ಅವರ ಉಪಸ್ಥಿತಿಯಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು.
ತಂಡ ರಚನೆ
ಅಶೋಕ್ ಕುಮಾರ್ ರೈ ಮಾತನಾಡಿ, ಬ್ರಹ್ಮಕಲಶಕ್ಕೆಕಣಗಣನೆ ಪ್ರಾರಂಭಗೊಂಡಿದೆ. ಹೀಗಾಗಿ ಗ್ರಾಮದ ಪ್ರತಿಯೊಬ್ಬರು ಇದರ ಯಶಸ್ಸಿಗೆ ಪಾಲುದಾರರಾಬೇಕು, ಬೀದಿ ಅಲಂಕಾರ ಮತ್ತು ಚಪ್ಪರ ಅಳವಡಿಕೆಗೆ ಎರಡು ತಂಡ ರಚಿಸಲಾಗಿದೆ. ಆ ತಂಡದ ನೇತೃತ್ವದಲ್ಲಿ ಸ್ವಯಂಸೇವಕರು ಯಶಸ್ಸಿಗೆ ಶ್ರಮಿಸಲಿದ್ದಾರೆ. ಈ ಕಾರ್ಯಕ್ಕೆ ಅಗತ್ಯ ಇರುವ ಪರಿಕರಗಳನ್ನು ದೇವಾಲಯದ ವತಿಯಿಂದ ಒದಗಿಸಲಾಗುವುದು ಎಂದು ಹೇಳಿದರು.
ಐದು ದಿನ, ಐವತ್ತು ಜನರ ತಂಡ ಚಪ್ಪರ, ಬೀದಿ ಅಲಂಕಾರ ಸಹಿತ ಶ್ರಮದಾನ ಕೆಲಸಗಳನ್ನು ಕೈಗೊಳ್ಳುವ ಸಲುವಾಗಿ ದಿನ ಪೂರ್ಣ ಐದು ಶ್ರಮದಾನಕ್ಕೆಂದು ದಿನ ನಿಗದಿಪಡಿಸಬೇಕು. ಪ್ರತೀ ದಿನ ಐವತ್ತು ಜನಕ್ಕಿಂತ ಹೆಚ್ಚಿನ ತಂಡ ಇದಕ್ಕಾಗಿ ಸಿದ್ಧವಾಗಬೇಕಿದೆ. ಸ್ವಯಂಸೇವಕರನ್ನು ಸಂಪರ್ಕಿಸುವ ಕಾರ್ಯವು ಆಯಾ ತಂಡದ ಮುಖ್ಯಸ್ಥರ ಮೂಲಕ ನಡೆಯಲಿದೆ ಎಂದು ಆಶೋಕ್ ಕುಮಾರ್ ರೈ ವಿವರಿಸಿದರು.
ಪ್ರಶಾಚಿಂತನೆಯಲ್ಲಿ ಕಂಡು ಬಂದಂತೆ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಮುಷ್ಠಿಕಾಣಿಕೆ, ಪೂಜೆ ಹಾಗೂ ಮಠಂತಬೆಟ್ಟು ದೇವಾಲಯದಲ್ಲಿ ನಡೆಯಲಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತು ಕೋಶಾಧಿಕಾರಿ ನಿರಂಜನ ರೈ ಮಠಂತಬೆಟ್ಟು ಸಂಚಾಲಕ ಗಂಗಾಧರ ಶೆಟ್ಟಿ ಮಠಂತಬೆಟ್ಟು ಕಾರ್ಯದರ್ಶಿಗಳಾದ ರಮೇಶ್ ನಾಯಕ್ ನಿಡ್ಯ, ಕುಮಾರನಾಥ ಎಸ್.ಪಲ್ಲತ್ತಾರು, ಉಪಾಧ್ಯಕ್ಷರಾದ ಕೇಶವ ಭಂಡಾರಿ ಕೈಪ, ರಾಜೀವ ಶೆಟ್ಟಿ ಕೇದಗೆ, ಸಂಘಟನ ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು, ಶಿವಪ್ರಸಾದ್ ರೈ ಎಂ. ಮಠಂತಬೆಟ್ಟು ದೇವದಾಸ ಗೌಡ ಪಿಲಿಗುಂಡ, ದಾಮೋದರ ಶೆಟ್ಟಿ ಮಠಂತಬೆಟ್ಟು ಸದಾಶಿವ ಸಾಮಾನಿ ಸಂಪಿಗೆದಡಿ, ಮೋನಪ್ಪಗೌಡ, ಡಿ.ಅಶೋಕ ಗೌಡ, ಜಯರಾಮ ರೈ ಉಪಸ್ಥಿತರಿದ್ದರು.