ಪುತ್ತೂರು :ದ. ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ(ರಿ) ವತಿಯಿಂದ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಬೃಹತ್ ರಕ್ತದಾನ ಶಿಬಿರವು ಫೆ. 7ರಂದು ಟೌನ್ ಹಾಲ್ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.
ದ. ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀ. ಅಶೋಕ್ ನಾಯ್ಕ ಕೆದಿಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದು, ಕರ್ನಾಟಕ ಮರಾಟಿ ಯುವ ವೇದಿಕೆ ಬೆಂಗಳೂರಿನ ಅಧ್ಯಕ್ಷ ದಿನೇಶ್ ನಾಯ್ಕ ಬಾಬುಮೂಲೆ, ಪುತ್ತೂರು ನಗರ ಸಂಚಾರ ಪೋಲಿಸ್ ಠಾಣೆಯ ಆಕರ್ಷಕ ಉಪನಿರೀಕ್ಷಕ ರಾಮ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯು ತಿಳಿಸಿದೆ.