ಉಪ್ಪಿನಂಗಡಿ: ಕ್ಯಾಟರಿಂಗ್ ವೊಂದರ ಆಹಾರ ಸಾಗಾಟದ ಪಿಕಪ್ ಮರಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಇಬ್ಬರು ದಾರುಣವಾಗಿದೆ ಮೃತಪಟ್ಟ ಘಟನೆ ರಾ. ಹೆ.75 ರ ತುಂಬೆ ರಾಮಲಕಟ್ಟೆಯಲ್ಲಿ ನಡೆದಿದ್ದು, ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (21) ಮತ್ತು ಆಶಿತ್ (21) ಮೃತಪಟ್ಟಿದ್ದು, ಅವರಿಬ್ಬರ ಅಂತ್ಯಕ್ರಿಯೆಯನ್ನು ಇಂದು ಜೊತೆಯಾಗಿ ನಡೆಸಲಾಯಿತು.
ಹೌದು… ಸಾವಿನಲ್ಲೂ ಒಂದಾದ ಜೀವದ ಗೆಳೆಯರ ಮೃತದೇಹವನ್ನು ಉಪ್ಪಿನಂಗಡಿ ಜಂಕ್ಷನ್ ನಿಂದ ಮೆರವಣಿಗೆ ಮೂಲಕ ತಂದು ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಾಗಿ ಉಪ್ಪಿನಂಗಡಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೆರವಣಿಗೆಯಲ್ಲಿ ಹಲವಾರು ಮಂದಿ ನೆರೆದಿದ್ದು, ಕುಟುಂಬಸ್ಥರ ಮತ್ತು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟುವಂತಿತ್ತು…