ಮಂಗಳೂರು: ಅನ್ಯ ಧರ್ಮದ ಯುವತಿಯ ಜೊತೆ ಹೋಗುತ್ತಿದ್ದ ಹಿನ್ನೆಲೆ, ಬೈಕ್ ಹಿಂಬಾಲಿಸಿ ಯುವಕನಿಗೆ ಥಳಿಸಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ನ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್ಮೆಂಟ್ ಬಳಿ ನಡೆದಿದೆ.
ನೈತಿಕ ಪೊಲೀಸ್‌ಗಿರಿ (Moral policing) ಹೆಸರಿನಲ್ಲಿ ಯುವಕರ ತಂಡ ಈ ಕೃತ್ಯ ಎಸಗಿದ್ದಾರೆ. ಅನ್ಯ ಧರ್ಮದವರ ಜೊತೆ ಓಡಾಡದಂತೆ ಯುವತಿಗೆ ಧಮ್ಕಿ ಹಾಕಿದ್ದಾರೆ. ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಮೇಲೆ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾರೆ.
ಯುವತಿ ಅಪಾರ್ಟ್‌ಮೆಂಟ್ ಖಾಲಿ ಮಾಡುತ್ತಿದ್ದ ಹಿನ್ನೆಲೆ ಲಗೇಜ್ ಶಿಫ್ಟ್ ಮಾಡಿ, ಯುವತಿಯನ್ನು ಕರೆದೊಯ್ಯುತ್ತಿದ್ದ ಯುವಕನನ್ನು ಹಿಂಬಾಲಿಸಿ ಬಂದ ಯುವಕರ ತಂಡ ಹಲ್ಲೆ ನಡೆಸಿದೆ. ಸದ್ಯ ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.