ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ದುಬಾರಿ ಬೆಲೆಯ ಎರಡು ವಾಚ್ಗಳನ್ನ ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಎರಡು ವಾಚ್ಗಳ ಮೌಲ್ಯ ಬರೋಬ್ಬರಿ 5 ಕೋಟಿ ಮೌಲ್ಯ ಎಂದು ಹೇಳಲಾಗಿದೆ.
ವಿಶ್ವಕಪ್ನಲ್ಲಿ ಸೋಲನ್ನ ಅನುಭವಿಸಿ ಹಾರ್ದಿಕ್ ಪಾಂಡ್ಯಾ ಹಾಗೂ ಟೀಂ ಇಂಡಿಯಾದ ಕೆಲವು ಆಟಗಾರರು ಭಾನುವಾರ ದೇಶಕ್ಕೆ ವಾಪಸ್ ಆಗಿದ್ದಾರೆ. ಅದರಂತೆ ಹಾರ್ದಿಕ್ ಪಾಂಡ್ಯ ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಕಷ್ಟಮ್ಸ್ ಅಧಿಕಾರಿಗಳ, ತಪಾಸಣೆ ವೇಳೆ ಪಾಂಡ್ಯರ ಎರಡು ವಾಚ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಯಾಕೆ ಸೀಜ್ ಮಾಡಿದ್ದಾರೆ..?
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ವಾಚ್ಗಳನ್ನ ಲಗೇಜ್ನಲ್ಲಿ ಇಟ್ಟುಕೊಂಡಿದ್ದರು. ಲಗೇಜ್ನಲ್ಲಿ ದುಬಾರಿ ಬೆಲೆಯ ವಾಚ್ ಇರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಅಲ್ಲದೇ ಆ ವಾಚ್ಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ ಎರಡೂ ವಾಚ್ಗಳನ್ನ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕಳೆದ ವರ್ಷ ದುಬೈನಲ್ಲಿ ಐಪಿಎಲ್ ಪಂದ್ಯಗಳನ್ನ ಆಡಿ ವಾಪಸ್ ಆದ ಸಂದರ್ಭದಲ್ಲಿ, ಮುಂಬೈ ಏರ್ಪೋರ್ಟ್ನಲ್ಲಿ ಇವರ ಸಹೋದರ ಕೃನಾಲ್ ಪಾಂಡ್ಯರನ್ನ ವಶಕ್ಕೆ ಪಡೆಯಲಾಗಿತ್ತು. ಇವರು ಕೂಡ ಯಾವುದೇ ದಾಖಲೆಗಳಿಲ್ಲದ 4 ವಾಚ್ಗಳನ್ನ ದುಬೈನಿಂದ ತಂದಿದ್ದರು.