ಪುತ್ತೂರು: ಕಬಕ ಪೇಟೆಯಲ್ಲಿ ನಡೆದ ಸರಣಿ ಕಳ್ಳತನ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಳವುಗೈದ ಕಳ್ಳನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ತಿಳಿದು ಬಂದಿದೆ.
ನ.15 ರಂದು ತಡರಾತ್ರಿ ಕಬಕದಲ್ಲಿ ಹೊಟೇಲ್, ಅಂಗಡಿ, ಗ್ಯಾರೇಜ್‌ನಿಂದ ಕಳ್ಳತನ ನಡೆದಿದ್ದು, ಈ ಘಟನೆ ನ.16 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡ ಪುತ್ತೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಉತ್ತರ ಪ್ರದೇಶದ ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

























