ಸವಣೂರು: ಬಿಸಿ ನೀರು ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಕಡಬ ತಾಲೂಕಿನ ಸವಣೂರಿನ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನ.16 ರಂದು ನಡೆದಿದೆ.
ಮೃತರನ್ನು ಸವಣೂರು ಗ್ರಾಮದ ಮಾಂತೂರು ನಿವಾಸಿ ಕುಂಞಾಲಿಮ್ಮ (60) ಎನ್ನಲಾಗಿದೆ.
ಕುಂಞಾಲಿಮ್ಮ ರವರು ಒಂದೂವರೆ ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ನ.15ರಂದು ಸಂಜೆ ಸ್ನಾನ ಮಾಡಲು ಒಲೆಯಲ್ಲಿ ಬಿಸಿ ನೀರು ಕಾಯಿಸಿ, ಬಿಸಿನೀರು ತುಂಬಿರುವ ಪಾತ್ರೆಯನ್ನು ಎತ್ತಿಕೊಂಡು ಬಚ್ಚಲು ಕೋಣೆಗೆ ಒಯ್ಯುತ್ತಿದ್ದಾಗ ಆಕಸ್ಮಿಕವಾಗಿ ಬಿಸಿ ನೀರು ತುಂಬಿದ್ದ ಪಾತ್ರೆ ಕೈ ಹಿಡಿತದಿಂದ ಜಾರಿ ಕೆಳಗೆ ಬಿದ್ದು ಬಿಸಿ ನೀರು ಮೈ-ಮೇಲೆ ಬಿದ್ದು ಸುಟ್ಟ ಗಾಯಗಳಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು.ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ಘಟನೆ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.