ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಹೌದು ವಿಶ್ವ ಕಂಡ ಕ್ರಿಕೆಟ್ನ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ಎಲ್ಲಾ ಫಾರ್ಮೆಟ್ ಕ್ರಿಕೆಟ್ಗೂ ಗುಡ್ ಬೈ ಹೇಳಿದ್ದಾರೆ.
ತಮ್ಮ ನಿವೃತ್ತಿಯ ನಿರ್ಧಾರವನ್ನ ಟ್ವಿಟರ್ನಲ್ಲಿ ಪ್ರಕಟಿಸಿರುವ ಮಿಸ್ಟರ್ 360, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.. 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಡಿವಿಲಿಯರ್ಸ್, ಐಪಿಎಲ್ ಸೇರಿದಂತೆ ವಿಶ್ವ ಟಿ20 ಕ್ರಿಕೆಟ್ ಲೀಗ್ಗಳಲ್ಲಿ ಮುಂದುವರಿದಿದ್ದರು. ಆದ್ರೀಗ ಈ ಟಿ20 ಲೀಗ್ಗಳಿಂದಲೂ ಹಿಂದೆ ಸರಿದಿರುವ ಎಬಿ ಡಿವಿಲಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
37 ವರ್ಷದ ಎಬಿಡಿ ತಮ್ಮ 17ನೇ ವಯಸ್ಸಿನಿಂದ ಕ್ರಿಕೆಟ್ ವೃತ್ತಿ ಆರಂಭಿಸಿದ್ದರು. ದಕ್ಷಿಣ ಆಫ್ರಿಕಾ ಪರ ಒಟ್ಟು 114 ಟೆಸ್ಟ್ ಪಂದ್ಯಗಳನ್ನ ಆಡಿದ್ದಾರೆ. ಇನ್ನು 228 ಏಕದಿನ ಪಂದ್ಯ ಹಾಗೂ 78 ಟಿ-20 ಪಂದ್ಯಗಳನ್ನ ಆಡಿದ್ದಾರೆ.