ಪುತ್ತೂರು: ಬೆಂಗಳೂರಿನ ಎಸ್.ಎಸ್ ಕಲಾ ಸಂಗಮದವರು 66 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ.ಜೆ ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ರಾಷ್ಟçಮಟ್ಟದ ಯೋಗ ಸ್ಫರ್ಧೆಯಲ್ಲಿ ವಿಶೇಷ ಸಾಧನೆಗೈದ ಪ್ರಯುಕ್ತ ಈತನನ್ನು ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯ ಪುಣ್ಯಕ್ಷೇತ್ರ ನಂದಿಪುರದ ಪರಮ ಪೂಜ್ಯ ಮಹೇಶ್ವರ ಮಹಾಸ್ವಾಮಿಗಳು, ಖ್ಯಾತ ಗಾಯಕ ಮತ್ತು ಚಲನಚಿತ್ರ ನಟ ಶಶಿಧರ ಕೋಟೆ, ಗುರುರಾಜ್ ಹೊಸಕೋಟೆ, ಜ್ಯೋತಿಷ್ಯ ವಿದ್ವಾನ್ ಡಾ. ಸುಬ್ರಹ್ಮಣ್ಯ ಶರ್ಮ ಗುರೂಜಿ ಇತರ ಗಣ್ಯರು ಉಪಸ್ಥಿತರಿದ್ದರು.
ಈತನು ನೆಹರೂನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.