ಪುತ್ತೂರು: ರಿಕ್ಷಾ ನಿಲ್ದಾಣದ ಬಳಿ ನಿಂತಿದ್ದ ವೇಳೆ ಕೆಲ ವ್ಯಕ್ತಿಗಳು ಆಗಮಿಸಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆಯೊಡ್ಡಿ,ಕೈಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿ ವ್ಯಕ್ತಿಯೊಬ್ಬರು ಠಾಣೆಗೆ ದೂರು ನೀಡಿದ ಘಟನೆ ಕೆಮ್ಮಿಂಜೆಯ ಮೊಟ್ಟೆತ್ತಡ್ಕ ಎಂಬಲ್ಲಿ ನಡೆದಿದೆ.
ದೂರುದಾರರನ್ನು ಕೆಮ್ಮಿಂಜೆ ನಿವಾಸಿ ಅನೂಪ್ ಕುಮಾರ್ ಎನ್ನಲಾಗಿದೆ.
ಲೋಹಿತ್ ಯಾನೆ ಪುಟ್ಟ ಮತ್ತು ಇತರ ನಾಲ್ಕು ಜನರ ವಿರುದ್ಧ ದೂರು ನೀಡಲಾಗಿದೆ.
ಅನೂಪ್ ರವರು ಮೊಟ್ಟೆತ್ತಡ್ಕದ ರಿಕ್ಷಾ ನಿಲ್ದಾಣದ ಬಳಿ ನಿಂತಿದ್ದ ವೇಳೆ ಲೋಹಿತ್ ಮತ್ತು ಅವರ ತಂಡ ಅವಾಚ್ಯ ಶಬ್ಧಗಳಿಂದ ಬೈದು, ಬೆದರಿಕೆಯೊಡ್ಡಿ, ಕೈಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ. 98/2021 ಕಲಂ: 143,323, 336, 339, 350, 351ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.