ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಪಾಪ್ಯುಲರ್ ಫ್ರಂಟ್ ಆಫ್ ಆಗ್ರಹಿಸಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಜಾಬಿರ್ ಅರಿಯಡ್ಕ, ಇಂದು ಸರಕಾರಿ ಕಾಲೇಜಿನಲ್ಲಿ ನಡೆದಂತಹ ಹಲ್ಲೆ, ನಿರಂತರವಾಗಿ ಪುತ್ತೂರಿನಲ್ಲಿ ಒಂದು ಸಮುದಾಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಟ್ಟುಕೊಂಡು ಅವರಿಗೆ ನಿರಂತರವಾದಂತಹ ದಬ್ಬಾಳಿಕೆ ನಡೆಯುತ್ತಿದೆ. ಮೊನ್ನೆ ಕೆಲ ಮುಖಂಡರು ಸೇರಿಕೊಂಡು ಕಾಲೇಜಿನಲ್ಲಿ ಹಿಂದೂಗಳನ್ನಿಟ್ಟುಕೊಂಡು ಸಭೆ ನಡೆಸಿದ್ದು, ನಂತರದ ಬೆಳವಣಿಗೆಯಾಗಿ ಈ ಕೃತ್ಯಗಳೆಲ್ಲಾ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ನಾವು ಹಲವು ಬಾರಿ ಪೊಲೀಸರಿಗೆ ಮನವಿ ನೀಡಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸುವುದಾದರೇ, ನಮ್ಮ ಸಮುದಾಯದ ವಿದ್ಯಾರ್ಥಿಗಳ ತಾಳ್ಮೆಯನ್ನು ಪರೀಕ್ಷಿಸುವುದಾದರೇ, ಖಂಡಿತವಾಗಿಯೂ ಪುತ್ತೂರಿನಲ್ಲಿ ನಿಮ್ಮ ಊಹೆಗಿಂತಾ ಮಿಗಿಲಾದಂತಹ ಪ್ರತಿಭಟನೆ ಮಾಡಬೇಕಾಗುತ್ತದೆ. ಇನ್ನೂ ಸಹಿಸಿ ಸುಮ್ಮನೆ ಇರಲು ಸಾಧ್ಯವಿಲ್ಲ, ಕಲಿಯಬೇಕಾದಂತಹ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಮಲಗುತ್ತಿದ್ದಾರೆ ಇದನ್ನು ಕಂಡು ಕಾಣದಂತೆ ನಟಿಸುವುದಾದರೇ ಪುತ್ತೂರಿನಾದ್ಯಂತ ನಮ್ಮ ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರತಿಭಟಿಸುತ್ತೇವೆ.
ಶೀಘ್ರವಾಗಿ ಆರೋಪಿಗಳ ಬಂಧನವಾಗಬೇಕು. ಇಲ್ಲವಾದಲ್ಲಿ ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಿ, ಧರಣಿ ಕೂರಲಾಗುವುದು. ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಬೇಕು. ಅಧಿಕಾರಿಗಳು ತಾತ್ಸಾರ ಮನೋಭಾವದಿಂದ ಮುಂದುವರಿಯುದಾದರೆ, ಪುತ್ತೂರಿನ ಶಾಂತಿಯನ್ನು ಕೆಡುವುದಾದರೇ ಅದಕ್ಕೆ ನೇರಹೊಣೆ ಪೊಲೀಸ್ ಇಲಾಖೆಯಾಗಿರುತ್ತದೆ. ಸಂವಿಧಾನ ಬದ್ಧವಾಗಿ ತಡೆಯಲು ವಿದ್ಯಾರ್ಥಿ ಚಳುವಳಿ ಮುಖ್ಯವಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಘಟನೆಯನ್ನು ಬಲವಾಗಿ ಖಂಡಿಸುತ್ತದೆ.. ಎಲ್ಲಿಯವರೆಗೆ ಅವರಿಗೆ ನ್ಯಾಯ ಸಿಗುವುದಿಲ್ಲವೋ ಅಲ್ಲಿಯವರೆಗೆ ಹೋರಾಟವನ್ನು ಕೈ ಬಿಡಲಾಗುವುದಿಲ್ಲ ಎಂದರು…