ಪುತ್ತೂರು: ವರ್ಷಗಳ ಹಿಂದೆ ಕಡಬ ತಾಲೂಕಿನ ಮರ್ದಾಳ ಎಂಬಲ್ಲಿ ಯಮಹ ಬೈಕ್ ಹಾಗೂ ಮಾರುತಿ ಒಮ್ನಿ ಕಾರ್ ಅಪಘಾತ ಪ್ರಕರಣದಲ್ಲಿ, ಬೈಕಿನ ಹಿಂಬದಿ ಸವಾರ ತೀವ್ರ ಗಾಯಗೊಂಡು,ಮರಣ ಹೊಂದಿದ, ಪ್ರಕರಣಕ್ಕೆ ಸಂಬಂಧಿಸಿದಂತೆ, ಓಮ್ನಿ ಚಾಲಕ ನನ್ನು ದೋಷಮುಕ್ತಗೊಳಿಸಿ, ಪುತ್ತೂರಿನ ನ್ಯಾಯಾಲಯ ಬಿಡುಗಡೆಗೊಳಿಸಿ ಆದೇಶಿಸಿದೆ.
ಕಳೆದ 27.12.2015 ರಂದು ಸಂಜೆ ಕಡಬ ತಾಲೂಕು ಬಂಟರ ಗ್ರಾಮದ ಮರ್ದಾಳ ಎಂಬಲ್ಲಿ, ಮಾರುತಿ ಓಮ್ನಿ ಕಾರ್ ರಸ್ತೆ ಬದಿಯಿಂದ ರಸ್ತೆಗೆ ಒಮ್ಮೆಲೆ ತಿರುಗಿಸಿ, ಚಲಾಯಿಸಿದ ಕಾರಣ, ಅದೇ ರಸ್ತೆಯಲ್ಲಿ ಬರುತ್ತಿದ್ದ ಯಮಹಾ ಬೈಕ್, ಓಮ್ನಿಗೆ ತಾಗಿ ಅಪಘಾತಕ್ಕೀಡಾಗಿ, ಬೈಕಿನ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು, ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ವೇಳೆ ಮರಣ ಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಡಬ ಪೊಲೀಸರು ಮಾರುತಿ ಓಮ್ನಿ ಚಾಲಕ ಉಮ್ಮರ್ ಬೆಳ್ಳಾರೆ ಎಂಬವರ ವಿರುದ್ಧ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಪುತ್ತೂರಿನ ನ್ಯಾಯಾಲಯವು, ಆರೋಪಿ ಓಮ್ನಿ ಚಾಲಕನನ್ನು ನಿರ್ದೋಷಿಯೆಂದು ಪರಿಗಣಿಸಿ, ದೋಷಮುಕ್ತಗೊಳಿಸಿ, ಬಿಡುಗಡೆಗೊಳಿಸಿದ್ದಾರೆ. ಆರೋಪಿ ಪರ ಪುತ್ತೂರಿನ ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದಿಸಿದ್ದರು.