ಪುತ್ತೂರು: ತಾಲೂಕಿನ ಕೊಂಬೆಟ್ಟು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆ ಖಂಡನೀಯವಾಗಿದೆ ಮತ್ತು ಹಲ್ಲೆ ನಡೆಸಿ ತ್ರಿಶೂಲ ಹಿಡಿದು ಬೆದರಿಕೆ ದರ್ಬಾರ್ ಮಾಡುತ್ತಿರುವ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಪುತ್ತೂರು ಪ್ರದೇಶದಲ್ಲಿ ಸಾಮರಸ್ಯ ಕಾಪಾಡುವ ಕೆಲಸ ಕಾರ್ಯಗಳನ್ನು ಪೋಲಿಸ್ ಇಲಾಖೆಯು ಮಾಡಬೇಕು ಎಂದು ದ.ಕ.ಜಿಲ್ಲಾ ಕಾಂಗ್ರಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಆಗ್ರಹ ವ್ಯಕ್ತಪಡಿಸಿದ್ದಾರೆ.
ಪುತ್ತೂರು ಸದಾ ಶಾಂತಿ ಸಾಮರಸ್ಯತೆಗೆ ಹೆಸರುವಾಸಿಯಾದ ಪ್ರದೇಶ ಇಲ್ಲಿ ಎಬಿವಿಪಿ ಎಂಬ ಸಂಘಟನೆಯ ವಿದ್ಯಾರ್ಥಿಗಳು ಅಮಾಯಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಕೋಮು ಗಲಭೆ ಎಬ್ಬಿಸಲು ಪ್ರಚೋಧನೆ ನೀಡುತ್ತಿದ್ದಾರೆ ಇವರಿಗೆ ರಕ್ಷಣೆ ನೀಡುವ ಬಾಹ್ಯ ಶಕ್ತಿಗಳನ್ನು ಅಟ್ಟಡಗಿಸುವ ಕೆಲಸ ಕಾರ್ಯಗಳು ಪೋಲಿಸ್ ಇಲಾಖೆಯ ಮುಖಾಂತರ ಆಗಬೇಕಾಗಿದೆ ಎಂದರು.