ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ಗೋಳ್ತಮಜಲು – ಸಿ ಒಕ್ಕೂಟದ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಕಲ್ಲಡ್ಕ ವಲಯದ ಮಾಜಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಮೇಲ್ವಿಚಾರಕರಾದ ಸುಗುಣಾ ಶೆಟ್ಟಿ ಮತ್ತು ಸೇವಾ ಪ್ರತಿನಿಧಿ ಗಿರಿಜಾ ರವರ ಉಪಸ್ಥಿತಿಯಲ್ಲಿ ರಾಜೀವ್ ಯುವಕ ಮಂಡಲ ಬಾಯಿಲ ವೀರಕಂಬದಲ್ಲಿ ನಡೆಯಿತು.
ಗೋಳ್ತಮಜಲು -ಸಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಮತಾ ಎಸ್ ಶೆಟ್ಟಿ ಶಂಭುಗ , ಉಪಾಧ್ಯಕ್ಷರಾಗಿ ನಾಗಪ್ಪ ಪೂಜಾರಿ ಬದನ ಗದ್ದೆ, ಕಾರ್ಯದರ್ಶಿಯಾಗಿ ಮೋಹಿನಿ ಪಲ್ಲತಿಲ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ನಾಯ್ಕ ನೆಲ್ಲಿ , ಕೋಶಾಧಿಕಾರಿಯಾಗಿ ಸುಧಾಕರ ಶೆಟ್ಟಿ ಶಂಭುಗ ಉಪಸಮಿತಿಯ ಸದಸ್ಯರಾಗಿ ಸುಮಿತ್ರ, ಜಯಂತಿ, ಚಂದ್ರಾವತಿ, ಸುಮಿತ್ರ ಸಿ ,ಜಯಂತ, ಹಾಗೂ ದಾಖಲಾತಿ ಸಮಿತಿಯ ಸದಸ್ಯರಾಗಿ ವೀಣಾ, ಲಕ್ಷ್ಮಿ ಕೆ ,ಲೋಕೇಶ್, ಅಭಿಷೇಕ್, ವೀಣಾ ಶಂಭುಗ ಆಯ್ಕೆಯಾದರು.
ಈ ಸಂದರ್ಭದಲ್ಲಿ ಗೋಳ್ತಮಜಲು ಸಿ ಒಕ್ಕೂಟದ 32 ಸ್ವಸಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.