ಕಾರ್ಕಳ: ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಹೆಬ್ರಿ ತಾಲೂಕು ಶಿವಪುರ ಗ್ರಾಮದ ಮುಳ್ಳುಗುಡ್ಡೆ ಭಟ್ರಾಡಿ ಎಂಬಲ್ಲಿ ನ.26 ರಂದು ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ಪೆರ್ಡೂರು ಗ್ರಾಮದ ಪಾಡಿಗಾರದ ಸುದರ್ಶನ, ಕಿರಣ್ ಹಾಗೂ ಹಿರಿಯಡ್ಕದ ಸೋನಿತ್ ಎಂದು ಗುರುತಿಸಲಾಗಿದೆ.
ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳು ಈಜಲು ಭಟ್ರಾಡಿ ತೆರಳಿದ್ದರು. ಅವರಲ್ಲಿ ಮೂವರು ನೀರುಪಾಲಾಗಿದ್ದು, ಮೂವರ ಮೃತದೇಹವೂ ಪತ್ತೆಯಾಗಿದೆ.
ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಮೇಲೆ ಎತ್ತಲಾಗಿದ್ದು, ಸ್ಥಳಕ್ಕೆ ಹೆಬ್ರಿ ತಹಸೀಲ್ದಾರ್ ಪುರಂದರ, ಕಂದಾಯ ನಿರೀಕ್ಷಕ ಹಿತೇಶ್, ಪಿಎಸ್ಐ ಮಹೇಶ್, ಮುಖಂಡರಾದ ಸುರೇಶ್ ಶೆಟ್ಟಿ ಶಿವಪುರ, ರಮೇಶ್ ಪೂಜಾರಿ ಪರಿಶೀಲನೆ ನಡೆಸಿದರು.