ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ೭೨ನೇ ಸಂವಿಧಾನ ದಿನಾಚರಣೆಯನ್ನುಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕಿ ಸಾಯಿಸುಧಾರವರು ಸಂವಿಧಾನದ ದಿನದ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.

ನಂತರ ಸ0ವಿಧಾನದರೂಪುರೇಷೆಯ ಬಗ್ಗೆ ಮಾತನಾಡಿಭಾರತದ ಸಂವಿಧಾನವು ನಮ್ಮ ಭಾರತೀಯ ಆಚಾರ-ವಿಚಾರಗಳ ಆಧಾರದ ಮೇಲೆ ನಿಂತಿದೆ. ನಮ್ಮ ಹಿರಿಯರು ಹೇಗೆ ನಮ್ಮನ್ನುಉತ್ತಮ ಮನುಷ್ಯನನ್ನಾಗಿ ಮಾಡಲು ಪ್ರಯತ್ನ ಪಡುತ್ತಿದ್ದರೂ, ಇಂದು ಅದೇ ರೀತಿ ನಮ್ಮ ಸಂವಿಧಾನ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯನ್ನುರಕ್ಷಿಸುವ, ಅವರ ಬೆಳವಣಿಗೆಗೆ ಅವಕಾಶವನ್ನು ಕೊಡುತ್ತದೆ ವಿದ್ಯಾರ್ಥಿಗಳು ಸಂವಿಧಾನದ ಆಶಯದ ಕುರಿತಾದ ಕಾರ್ಯಕ್ರಮಗಳನ್ನು ರೂಪಿಸಿ, ಸಮಾಜದ ಉನ್ನತಿಗೆ ಪ್ರಯತ್ನಿಸಬೇಕು.
ನಮ್ಮ ಸಂವಿಧಾನ ಪ್ರತಿಯೊಬ್ಬರನ್ನು ಸಮಾನರಾಗಿ ಕಾಣುವುದಲ್ಲದೆ, ಅವರಿಗೆ ಸಮಾನ ಅವಕಾಶ ನೀಡುತ್ತದೆ. ವಿದ್ಯಾರ್ಥಿಗಳೆಲ್ಲರೂ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಜೊತೆಗೆ ಸಮಾಜದ ಎಲ್ಲರಿಗೂ ಸಂವಿಧಾನದ ಆಶಯವನ್ನು ತಲುಪಿಸುವ ಕಾರ್ಯವನ್ನು ಮಾಡೋಣ ಹಾಗೂ ಆ ಮೂಲಕ ನಮ್ಮ ಸಂವಿಧಾನವನ್ನುಗೌರವಿಸೋಣ ಎ0ದು ಹೇಳಿದರು.
ಕಾರ್ಯಕ್ರಮದಲ್ಲಿಪ್ರಾಂಶುಪಾಲ ಮಹೇಶ ನಿಟಿಲಾಪುರ ,ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.