ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ತಕ್ಷಶಿಲಾವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಕೃಷ್ಣ ಪ್ರಸಾದ್ ನಡುಸಾರು ಮಾತನಾಡಿ ಅಂತರAಗ ಶುದ್ಧವಾಗಿದ್ದರೆ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಬಂಧುಪ್ರೇಮ, ದೇಶಪ್ರೇಮದಂಥ ಉತ್ತಮ ಉದಾತ್ತ ಆಲೋಚನೆಗಳಿಗೆ ಬದುಕನ್ನು ಬದಲಿಸುವ ಶಕ್ತಿ ಇದೆ. ದೇಹ ಮನಸ್ಸುಗಳ ನಡುವಿನ ಕೊಂಡಿ ಕಳಚಿಕೊಳ್ಳದಂತಿರ0ಬೇಕು.
ಪ್ರಾಣಾಯಾಮ, ಯೋಗಾಭ್ಯಾಸಗಳ ನೆರವಿನಿಂದ ಚಿಂತೆಯಿಲ್ಲದ ಅತಿಶ್ರೇಷ್ಠ ಮನಸ್ಥಿತಿಯನ್ನು ಸಾಧಿಸಬೇಕು. ನಮ್ಮ ಚಲನೆ ಸದಾ ಮೇಲ್ಮುಖವಾಗಿದ್ದುಯಶಸ್ಸು ನಮ್ಮನ್ನು ಹಿಂಬಾಲಿಸುವAತಿರಬೇಕು.ಮಾನವೀಯ ಸಂಬ0ಧಗಳಿಗೆ ಮಹತ್ವವನ್ನು ನೀಡಿ ಸತ್ಪಥದಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ವಸತಿ ನಿಲಯದ ಅಧ್ಯಕ್ಷ ರಮೇಶ ಪ್ರಭು, ಕರ್ಯದರ್ಶಿ ಶಿವಕುಮಾರ ಉಪಸ್ಥಿತರಿದ್ದರು. ವಸತಿ ನಿಲಯದ ಮುಖ್ಯ ನಿಲಯ ಪಾಲಕ ಗೋವಿಂದ ರಾಜ್ ಶರ್ಮ ಅತಿಥಿಗಳನ್ನು ಸ್ಯಾಗತಿಸಿ ವಂದಿಸಿದರು.