ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಿದ್ಯಾರ್ಥಿಗಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು, ಈ ಸಂದರ್ಭದಲ್ಲಿ ಆಗಮಿಸಿದ ಡಿವೈಎಸ್ ಪಿ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ.
‘ಕೆಲವು ವಿದ್ಯಾರ್ಥಿಗಳನ್ನು ಕರೆ ತಂದು ಠಾಣೆಯಲ್ಲಿರಿಸಲಾಗಿದೆ’ ಎಂದು ಆರೋಪಿಸಿದ್ದು, ಇದ್ದಕ್ಕೆ ಡಿವೈಎಸ್ ಪಿ ‘ನಮಗೆ ಕಾನೂನು ಕ್ರಮ ಕೈಗೊಳ್ಳಲು ಅಡ್ಡಿಬರಬಾರದು’ ಎಂದರು.
ಹಿಂದೂ ಮುಖಂಡರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಜಗದೀಶ್ ನೆತ್ತರಕೆರೆ, ಅಜಿತ್ ರೈ ಹೊಸಮನೆ, ಅಜಿತ್ ರೈ ಹೊಸಮನೆ, ಕೆ.ಪಿ. ಶೆಟ್ಟಿ ಮತ್ತು ಡಿ.ವೈ.ಎಸ್. ಗಾನ ಪಿ. ಕುಮಾರ್ ರವರ ನಡುವೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ..