ವಿಟ್ಲ : ಕೇಪು ಗ್ರಾಮ ಪಂ.ಪರಿಸರದಲ್ಲಿ ಸಾರ್ವಜನಿಕರ, ವಿದ್ಯಾಭಿಮಾನಿಗಳ ಅನುಕೂಲಕ್ಕಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಕೇಂದ್ರ ಗ್ರಂಥಾಲಯದ ನಿರ್ದೇಶನದಂತೆ ನಿಗದಿತ ಕಾಲಮಿತಿಯೊಳಗೆ ಸದಸ್ಯರಿಗೆ ಓದಲು ಹಾಗೂ ಮನೆಗೆ ಕೊಂಡೊಯ್ಯಲು ಇಲ್ಲಿನ ಸಿಬ್ಬಂದಿ ಮುಕ್ತ ಅವಕಾಶ ನೀಡಿದ್ದಾರೆ. ಸಾರ್ವಜನಿಕ ಸಹಕಾರದಿಂದಾಗಿ ಇಲ್ಲಿನ ಸಿಬ್ಬಂದಿ ಗ್ರಂಥಾಲಯವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದು, ಆದರೆ ಕಿಡಿಗೇಡಿಗಳು ಈ ಹಿಂದೆ ಯಾವುದೋ ಅಭಿವೃದ್ಧಿ ಕೆಲಸಗಳ ಉದ್ಧೇಶಕ್ಕಾಗಿ ಸಾರ್ವಜನಿಕರು ನೀಡಿದ್ದ ಅರ್ಜಿಗಳಿಂದ ಹೆಸರು ಮತ್ತು ಸಹಿ ನಕಲು ಮಾಡಿ ಸಿಬ್ಬಂದಿ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಹೊರಿಸಿ ಕೇಂದ್ರ ಗ್ರಂಥಾಲಯದ ಮುಖ್ಯಸ್ಥರಿಗೆ ದೂರು ನೀಡುವ ಮೂಲಕ ಆತಸ್ಥೈರ್ಯ ಕುಗ್ಗಿಸಲು ಸಂಚು ನಡೆಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇಂತಹ ಕಪೋಲಕಲ್ಪಿತ ನಕಲಿ ದೂರುಗಳನ್ನು ಹಿರಿಯ ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳಬಾರದೆಂದು ಗ್ರಂಥಾಲಯದ ನಿತ್ಯ ಫಲಾನುಭವಿಗಳು ಒತ್ತಿಯಿಸಿದ್ದು, ಅಲ್ಲದೇ ಸಮಾಜದಲ್ಲಿ ವಿಷಬೀಜ ಬಿತ್ತಿ ಸ್ವಾರ್ಥ ಸಾಧಿಸಲು ಹವಣಿಸುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟುವ ಮೂಲಕ ಪೊಲೀಸರು ಗ್ರಂಥಾಲಯದ ಪಾವಿತ್ರ್ಯತೆಯನ್ನು ರಕ್ಷಿಸಬೇಕಾಗಿ ಫಲಾನುಭವಿಗಳು ಆಗ್ರಹಿಸಿದ್ದಾರೆ..