ಮಂಗಳೂರು: ಕಾಲೇಜೊಂದರ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದ ಹಾಗೂ ಈ ವೇಳೆ ಅಲ್ಲಿ ಕರ್ತವ್ಯಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ ನಡೆದ ಘಟನೆ ಡಿ.2 ರಂದು ರಾತ್ರಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ 19 ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು , 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆದಿತ್ಯ, ಕೆನ್ ಜಾನ್ಸನ್, ಮುಹಮ್ಮದ್, ಅಬ್ದುಲ್ ಶಾಹಿದ್, ವಿಮಲ್, ಫಹಾದ್ , ಅಬು ತಹರ್, ಮುಹಮ್ಮದ್ ನಾಸಿಫ್, ಆದರ್ಶ ಬಂಧಿತರು.
ಪ್ರಕರಣದಲ್ಲಿ 7 ಮಂದಿ ವಿದ್ಯಾರ್ಥಿಗಳು ಹಾಗೂ 5 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಯೆನೆಪೋಯ ಪದವಿ ಕಾಲೇಜಿನ ವಿದ್ಯಾರ್ಥಿಗಳ ಎರಡು ತಂಡಗಳ ಯೆನೆಪೋಯ ಪದವಿ ಕಾಲೇಜಿನ ವಿದ್ಯಾರ್ಥಿಗಳ ಎರಡು ತಂಡಗಳು ಬೀದಿ ಕಾಳಗ ನಡೆಸಿದ್ದಾರೆ.
ಯೆನೆಪೋಯ ಕಾಲೇಜ್ ನಲ್ಲಿ ಮೂರನೇ ವರ್ಷದ ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ ನ ವಿದ್ಯಾರ್ಥಿ ಕೇರಳ ಮೂಲದ
ಆದರ್ಶ ಪ್ರೇಮಕುಮಾರ್ ನಿನ್ನೆ ಸಂಜೆ ತನ್ನ ಸ್ನೇಹಿತ ಅಭಿರಾಮಿಯನ್ನು ಭೇಟಿ ಮಾಡಿ ಮಾತುಕತೆಯಲ್ಲಿ ನಿರತನಾಗಿದ್ದಾಗ ಹಲ್ಲೆ ಪ್ರಕರಣ ನಡೆದಿದೆ.
ಸಿನಾನ್ ಹಾಗೂ ಇತರ 8 ಜನ ಅದರ್ಶ್ ಮೇಲೆ ಇಂಟರ್ ಲಾಕ್ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರೇಮ್ ಕುಮಾರ್ ಎಡಕೈಗೆ ಗಾಯ ಆಗಿದ್ದು, ಮೊಹಮ್ಮದ್ ನಸಿಪ್ ಎಂಬಾತನಿಗೂ ಗಾಯವಾಗಿದೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಅದರ್ಸ್ ಸ್ನೇಹಿತರಾದ ಅದೇ ಹಾಸ್ಟೇಲ್ ನ ಶನಿನ್ ಮತ್ತು ಶ್ರವಣರವರಿಗೆ ಎದುರು ತಂಡದ ವಿದ್ಯಾರ್ಥಿಗಳು ಜೀವ ಬೆದರಿಕೆ ಒಡ್ಡಿರುವುದಾಗಿ ಆದರ್ಶ ದೂರಿನಲ್ಲಿ ತಿಳಿಸಿದ್ದಾನೆ.
ಗಲಾಟೆ ಬಿಡಿಸಲು ಬಂದಿದ್ದ ತನ್ನ ಸ್ನೇಹಿತರಾದ ಶನಿನ್ ಮತ್ತು ಶ್ರವಣ್ ರವರು ಗುಜ್ಜರಕರೆ ಬಳಿ ಹಾಸ್ಟೆಲ್ ನಲ್ಲಿ ವಾಸ್ತವ ಇದ್ದು ಅವರು ಅಪಾಯದಲ್ಲಿದ್ದು ರಕ್ಷಣೆ ಮಾಡಲು ಆದರ್ಶ್ ಪೊಲೀಸರ ಬಳಿಕೋರಿಕೊಂಡಿದ್ದ. ಅದರಂತೆ ರಾತ್ರಿ ಪಿಎಸ್‌ಐ ಶೀತಲ್ ಹಾಗೂ ಸಿಬ್ಬಂದಿಗಳು ಹಾಸ್ಟೆಲ್ ಬಳಿ ಹೋದಾಗ ಹಾಸ್ಟೆಲ್ ನ ನಿವಾಸಿ ವಿದ್ಯಾರ್ಥಿಗಳು ಇಂಟರ್ ಲಾಕ್, ಕಲ್ಲು ಹಾಗೂ ಕುರ್ಚಿಗಳನ್ನು ಪೊಲೀಸರತ್ತ ಎಸೆದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿದ್ದಾರೆ.



























