ಪುತ್ತೂರು: ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ನೀಡಿರುವ ದೂರಿನ ಮೇರೆಗೆ ಎಸ್.ಡಿ.ಪಿ.ಐ. ಮತ್ತು ಸಿ.ಎಫ್.ಐ. ಸಂಘಟಕರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಮು ಭಾವನೆ ಕೆರಳಿಸಿ ವಿದ್ಯಾರ್ಥಿಗಳ ನಡುವೆ ಗಲಭೆ ನಡೆಸಲು ಉತ್ತೇಜನ ಹಾಗೂ ಸಾಮಾಜಿಕ ಸ್ವಾಸ್ಥ್ಯ ನಾಶ ಮಾಡಿ ಧರ್ಮದ ಆಧಾರದಲ್ಲಿ ಶಾಲಾ ಕಾಲೇಜುಗಳಲ್ಲಿ ಗಲಭೆ ನಡೆಸಲು ಪ್ರಚೋದನೆ ನಡೆಸುವಂತೆ ಭಾಷಣ ಮಾಡಿರುವುದು ಅಲ್ಲದೆ ಹಿಂದೂ ಮುಖಂಡರ ವಿರುದ್ಧ ಕೀಳು ಮಟ್ಟದ ಶಬ್ದಗಳಲ್ಲಿ ಮಾತನಾಡಿರುವುದಾಗಿ ಮತ್ತು
ಕಾಲೇಜಿನ ಒಳಗಡೆ ಅಕ್ರಮ ಪ್ರವೇಶ ಮಾಡಿ ಅಲ್ಲಿನ ವಿದ್ಯಾರ್ಥಿಗಳ ನಡುವೆ ಗಲಭೆ ನಡೆಸಲು ಹುನ್ನಾರ ನಡೆಸಿರುತ್ತಾರೆ ಎಂದು ಆರೋಪಿಸಿ ಪುಷ್ಪರಾಜ್ ಆಚಾರ್ಯ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಜಾಬೀರ್, ಸಾವದ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಠಾಣೆಯಲ್ಲಿ ಅ.ಕ್ರಂ 104/21 153ಎ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.