ಸುಳ್ಯ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಹಿಂದೂ ಜಾಗರಣ ವೇದಿಕೆಯ ತೊಡಿಕಾನ ಘಟಕದ ಗೌರವಾಧ್ಯಕ್ಷರಾದ ಕೃಷ್ಣಪ್ಪ ಅಡ್ಯಡ್ಕ ರವರು ಹೃದಯಾಘಾತದಿಂದಾಗಿ ಡಿ.4 ರಂದು ನಿಧನರಾದರು.
ಹಿಂದೂ ಮುಖಂಡರಾಗಿದ್ದ ಕೃಷ್ಣಪ್ಪ ಅಡ್ಯಡ್ಕ ರವರು ಅಯೋಧ್ಯಾ ಕರಸೇವೆಯಲ್ಲಿಯೂ ಭಾಗವಹಿಸಿದ್ದರು.
ಹಿಂದೂ ಜಾಗರಣ ವೇದಿಕೆಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ರವರು ಮೃತರ ಅಂತಿಮ ದರ್ಶನ ಪಡೆದು ಮನೆಯವರಿಗೆ ಸಾಂತ್ವನ ಹೇಳಿದರು.
ಮೃತರು ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.