ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮುಂಭಾಗದಲ್ಲಿ ಶುಕ್ರವಾರ ಮುಂಜಾನೆ ತಲವಾರು ತೋರಿಸಿ 3 ದನಗಳನ್ನು ಕದ್ದೊಯ್ದಿದ್ದ ಮೂವರು ದನಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಮೊಹಮದ್ ಸಲೀಂ (32) , ಮೊಹಮದ್ ತಂಜಿಲ್ ((25) ಮೊಹಮದ್ ಇಕ್ಬಾಲ್ (23)ಎನ್ನಲಾಗಿದೆ.
ಉಮೇಶ್ ಮಲರಾಯಸಾನ ಮತ್ತು ಉದಯ ಶೆಟ್ಟಿ ಎಂಬವರ ಮೇಯಲು ಬಿಟ್ಟ ದನದಗಳು ಆರೋಪಿಗಳು ಕದ್ದೊಯ್ದಿದ್ದರು.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಡಿಸಿಪಿ ಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಮಾರ್ಗದರ್ಶನ, ಎಸಿಪಿ ಮಹೇಶ್ ಕುಮಾರ್ ಸಲಹೆಯಲ್ಲಿ ಮೂಡಬಿದಿರೆ ಮತ್ತು ಬಜ್ಪೆ ಠಾಣಾ ಸಿಬ್ಬಂದಿಗಳ ಸಹಕಾರದೊಂದಿಗೆ ನಡೆಸಲಾಗಿದೆ.