ಪುತ್ತೂರು: ವ್ಯಕ್ತಿಯೋರ್ವರು ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ.
ಮೂಲತಃ ನಿಡ್ಪಳ್ಳಿ ನಿವಾಸಿ ಪ್ರಸ್ತುತ ಪುತ್ತೂರು ನೆಲ್ಲಿಕಟ್ಟೆ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಭಾಸ್ಕರ್ ಆಚಾರ್ಯ (39) ಮೃತಪಟ್ಟ ವ್ಯಕ್ತಿ.
ಇಂದು ಮುಂಜಾನೆ ಅವರಿಗೆ ಎದೆ ನೋವು ಕಾಣಿಸಿದ್ದು ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ತಾಯಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.



























