ಪುತ್ತೂರು: ತಿಂಡಿ ಪ್ರಿಯರಿಗೆ ಸವಿಯ ಹಬ್ಬವೇ ಸಿದ್ಧವಾಗಿದೆ. Marike’s ಕರುಂ ಕುರುಂ ತಿಂಡಿಮೇಳ ಆಗಸ್ಟ್ 1, 2 ಮತ್ತು 3ರಂದು ಎಪಿಎಂಸಿ ರಸ್ತೆಯ ತ್ರಿನೇತ್ರ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಿಕೆ ಮಳಿಗೆಯಲ್ಲಿ ನಡೆಯಲಿದ್ದು, ವಿವಿಧ ಬಗೆಯ ಕರುಕುರು ತಿಂಡಿಗಳು, ಚಿಪ್ಸ್, ಮಿಶ್ರಣ, ಖಾರ ತಿಂಡಿಗಳು ಹಾಗೂ ಸಾಂಪ್ರದಾಯಿಕ ರುಚಿಗಳ ಸಂಭ್ರಮವನ್ನು ಒಂದೇ ವೇದಿಕೆಯಲ್ಲಿ ಅನುಭವಿಸಬಹುದು.
ಈ ವಿಶೇಷ ತಿಂಡಿಮೇಳವು ಅಡುಕಲೆ ಸಹಯೋಗದಲ್ಲಿ ಆಯೋಜನೆಯಾಗುತ್ತಿದ್ದು, ಪ್ರತಿದಿನ ಬೆಳಿಗ್ಗೆ 10:00ರಿಂದ ರಾತ್ರಿ 8:30ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಕುಟುಂಬ ಸಮೇತ ಆಗಮಿಸಿ ವಿವಿಧ ಬಗೆಯ ರುಚಿಕರ ತಿಂಡಿಗಳನ್ನು ಸವಿಯಲು ಆಯೋಜಕರು ಆಹ್ವಾನಿಸಿದ್ದಾರೆ.
“ತಿಂಡಿ ಪ್ರಿಯರೇ ಗಮನಿಸಿ! ಆಗಸ್ಟ್ 1–3ರವರೆಗೆ ನಡೆಯುವ ‘Marike’s ಕರುಂ ಕುರುಂ ತಿಂಡಿಮೇಳ’ದಲ್ಲಿ ನೂರಾರು ಬಗೆಯ ಕರಕುರು ತಿಂಡಿಗಳ ಸವಿಯನ್ನು ಅನುಭವಿಸಿ. ಬೆಳಿಗ್ಗೆ 10ರಿಂದ ರಾತ್ರಿ 8:30ರವರೆಗೆ ಎಲ್ಲರಿಗೂ ಮುಕ್ತ ಪ್ರವೇಶ.”



























