ಪುತ್ತೂರು: ಸುನ್ನೀ ಸಂಘ ಕುಟುಂಬಗಳ ಸಹಯೋಗದೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಇದರ ಆಶ್ರಯದಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೌಲಾನಾ ಶಾಫಿ ಸಅದಿ ರವರಿಗೆ ‘ಪೌರ ಸನ್ಮಾನ ಹಾಗೂ ಜಮಾಅತ್ ಅಧಿವೇಶನ’ ಕಾರ್ಯಕ್ರಮವು ಡಿ.5 ರಂದು ಪುತ್ತೂರಿನ ಟೌನ್ ಹಾಲ್ ನಲ್ಲಿ ನಡೆಯಲಿದೆ.
ವಕ್ಫ್ ಅಂಗೀಕೃತ ಮಸೀದಿ, ಮದ್ರಸಗಳ ಅಭಿವೃದ್ಧಿ, ಕುಂದುಕೊರತೆಗಳ ಬಗ್ಗೆ ನೇರವಾಗಿ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.