ವಿಟ್ಲ: ಉತ್ತಮ ಕ್ರಿಕೆಟ್ ಆಟಗಾರ ಹಾಗೂ ಇತ್ತೀಚಿನ ದಿನಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಟ್ಲ ರಥಗದ್ದೆಯ ಬಳಿಯ ನಿವಾಸಿ ರಜನೀಶ್ ಆಲಿಯಾಸ್ ರಜ್ಜು (39) ಅನಾರೋಗ್ಯದಿಂದಾಗಿ ಡಿ.5 ರಂದು ನಿಧನರಾದರು.
ಖ್ಯಾತ ಕ್ರೀಡಾಪಟು ಆಗಿದ್ದ ಇವರು ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್ , ಖೋಖೋ ಆಟಗಾರರಾಗಿದ್ದು. ರಾಜ್ಯಮಟ್ಟದ ಆಟಗಾರರಾಗಿದ್ದರು.
ಉತ್ತಮ ಕ್ರಿಕೆಟ್ ಆಟಗಾರರಾದ ರಜನೀಶ್ ರವರು ಇತ್ತೀಚಿನ ಕೆಲ ವರ್ಷಗಳಿಂದ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ವಿಟ್ಲದ ವಿಜಿಸಿ ಕ್ರಿಕೆಟ್ ತಂಡದ ಪ್ರಧಾನ ಆಟಗಾರರಾಗಿದ್ದು, ಅನೇಕ ವರ್ಷಗಳ ಕಾಲ ಮಂಗಳೂರಿನ ಉರ್ವ ಫ್ರೆಂಡ್ಸ್ ಇದರ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಾರ್ಯನಿರ್ವಹಿಸಿ ಮಂಗಳೂರು ಸೇರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಇವರ ನಿಧನದಿಂದ ದಕ್ಷಿಣ ಕನ್ನಡ ಜಿಲ್ಲೆಯು ಪ್ರಮುಖ ಕ್ರಿಕೆಟ್ ಕ್ರೀಡಾಪಟುವನ್ನು ಕಳೆದುಕೊಂಡಿದೆ.