ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ, ಪುಣಚ ಮಹಾಶಕ್ತಿ ಕೇಂದ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಡಿ.06 ರಂದು ಇಡ್ಕಿದು ಸೊಸೈಟಿ ಸಭಾಭವನದಲ್ಲಿ ನಡೆಯಿತು.
ಚುನಾವಣಾ ಪ್ರಚಾರ ಸಭೆಯಲ್ಲಿ ಕೆಲ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭದಲ್ಲಿ ರಾಜೇಶ್ ಬಾಳೆಕಲ್ಲು ರವರು ಬಿಜೆಪಿ ಸೇರ್ಪಡೆಯಾಗಲು ಬಿಜೆಪಿ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಎದ್ದು ನಿಂತು ಕಾರ್ಯಕರ್ತರು ರಾಜೇಶ್ ಬಾಳೆಕಲ್ಲು ರವರು ಬಿಜೆಪಿ ಸೇರ್ಪಡೆಯನ್ನು ವಿರೋಧಿಸಿ ದಿಕ್ಕಾರ ಕೂಗಿದರು ಎನ್ನಲಾಗಿದೆ.