ದಿವಂಗತ ಕನ್ನಡ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಯೋಜನೆಯಾದ ‘ಗಂಧದ ಗುಡಿ’ಯ ಟೀಸರ್ ಬಿಡುಗಡೆಯಾಗಿದೆ. ”ಗಂಧದಗುಡಿ” ವೈಲ್ಡ್ ಡಾಕ್ಯುಮೆಂಟರಿಯನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಪಿಆರ್ ಕೆ ಆಡಿಯೋನಲ್ಲಿ ಬಿಡುಗಡೆ ಮಾಡಿದ್ದಾರೆ.

ಅಪ್ಪು ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದಂದು ಟೀಸರ್ ರಿಲೀಸ್ ಆಗಿದೆ. ನವೆಂಬರ್ 1 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಪುನೀತ್ ಅವರ ಅಕಾಲಿಕ ಮರಣದಿಂದಾಗಿ ಬಿಡುಗಡೆ ಮುಂದೂಡಲಾಗಿತ್ತು.
ಅದ್ಭುತ ಸ್ಥಳಗಳಿಗೆ ಭೇಟಿ ನೀಡಿರುವ ಅಪ್ಪು, ಸಾಕಷ್ಟು ಅಪಾಯಕಾರಿ ಸ್ಟಂಟ್ಗಳನ್ನು ಕೂಡ ಈ ವೀಡಿಯೋನಲ್ಲಿ ಅದ್ಭುತವಾಗಿ ಮಾಡಿದ್ದಾರೆ. ಪಾಲ್ಸ್ ತುತ್ತ ತುದಿಯಲ್ಲಿ ನಿಂತು ”ಗಂಧದಗುಡಿ”ಯ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಅಂದುಕೊಂಡತೆ ಆಗಿದ್ದರೆ ನವೆಂಬರ್-1 ನೇ ತಾರೀಖು ಕನ್ನಡ ರಾಜ್ಯೋತ್ಸವದ ಪ್ರಯುಕ್ತ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೇ ”ಗಂಧದಗುಡಿ” ವೀಡಿಯೋವನ್ನು ರಿಲೀಸ್ ಮಾಡಿಸಬೇಕು ಎಂದು ಅಪ್ಪು ಪ್ಲಾನ್ ಮಾಡಿದ್ದರು.
ಆದರೆ ವಿಧಿಯಾಟವೇ ಬೇರೆ ಆಗಿತ್ತು. ಹೃದಯಾಘಾತದಿಂದ ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿದ್ದರು. ಸದ್ಯ ಪಿಆರ್ ಕೆ ಸ್ಟುಡಿಯೋದಲ್ಲಿ ರಿಲೀಸ್ ಆಗಿರುವ ”ಗಂಧದಗುಡಿ” ಟೀಸರ್ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಅಪ್ಪುವನ್ನು ದೊಡ್ಡ ಪರದೆ ಮೇಲೆ ಸಂಪೂರ್ಣವಾಗಿ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು 2022 ರವರಗೆ ಕಾಯಲೇ ಬೇಕಾಗಿದೆ.