ಪುತ್ತೂರು: ಹಾರಾಡಿ ಮನೆಯಲ್ಲಿ ವಾಸವಾಗಿರುವ ಆರಿಶ್ ಬೊಳುವಾರು ಅವರು ಬಂಡವಾಳ ರೂಪದಲ್ಲಿ ಸಿನಾನ್ ಜಾನ್ ಕಾಶಿಂ ಹಾಜಿ ಅವರು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿನಾನ್ ಜಾನ್ ಕಾಶಿಂ ಹಾಜಿ ಅವರ ಕೊಂಕಣ ರೈಲ್ವೆ ಪಾರ್ಸೆಲ್ ಸರ್ವೀಸ್ ಅಗ್ರಿಗೇಟರ್ ನಲ್ಲಿ ಸಬ್ ಏಜೆಂಟ್ ಆಗಿ ಕೆಲಸ ಮಾಡುವ ಆರಿಶ್ ಗೆ ಸಲ್ಲತಕ್ಕಂತಹ ರೂಪಾಯಿ 1 ಲಕ್ಷದ 25 ಸಾವಿರ ಮೊತ್ತದ ಹಣವನ್ನು ನೀಡದೆ ಮೋಸ ಮಾಡುತ್ತಿದ್ದಾರೆ, ನನ್ನ ಹಣವನ್ನು ನನಗೆ ಕಾನೂನು ಬದ್ಧವಾಗಿ ಹಿಂತಿರುಗಿಸಿಕೊಡಬೇಕಾಗಿ ಆಗ್ರಹಿಸಿಕೊಂಡಿರುತ್ತಾರೆ..