Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

    ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

    ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

    ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

    ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

    ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

    ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

    ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

    ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

    ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬಂಟ್ವಾಳ

ವೀರಕಂಭ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ: ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುವ ವೈದ್ಯಕೀಯ ಶಿಬಿರಗಳು ಸಹಕಾರಿಯಾಗಿದೆ- ಸಂತೋಷ್ ಕುಮಾರ್ ಶೆಟ್ಟಿ

December 9, 2021
in ಬಂಟ್ವಾಳ
0
ವೀರಕಂಭ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ: ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುವ ವೈದ್ಯಕೀಯ ಶಿಬಿರಗಳು ಸಹಕಾರಿಯಾಗಿದೆ- ಸಂತೋಷ್ ಕುಮಾರ್ ಶೆಟ್ಟಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬಂಟ್ವಾಳ: ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುವ ವೈದ್ಯಕೀಯ ಶಿಬಿರಗಳು ಸಹಕಾರಿಯಾಗಿದೆ ಎಂದು ಮಜಿ ಶಾಲೆಯ ದತ್ತು ಸಂಸ್ಥೆ ಮಾತ ಡೆವಲಪರ್ಸ್ ಸುರತ್ಕಲ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು.

Advertisement
Advertisement
Advertisement

ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆ ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿ ಹಾಗೂ ಶಾಲಾ ದತ್ತು ಸಂಸ್ಥೆ ಹಾಗೂ ಶತಮಾನೋತ್ಸವ ಆಚರಣಾ ಸಮಿತಿ ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಭ ಹಾಗೂ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಸಹಯೋಗದೊಂದಿಗೆ ಮಜಿ ವೀರಕಂಬ ಶಾಲೆಯಲ್ಲಿ ಗುರುವಾರ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

Advertisement
Advertisement

ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಆದ್ಯತೆ ನೀಡಿ ಶಿಬಿರ ಆಯೋಜಿಸಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಮಜಿ ಶಾಲೆಗೆ ಬರುವ ಮಕ್ಕಳ ಹಾಗೂ ಅವರ ಪೋಷಕರ ಆರೋಗ್ಯದ ರಕ್ಷಣೆಗೆ ಮಾತ ಡೆವಲಪರ್ಸ್ ಬದ್ಧವಾಗಿದ್ದು, ಇದರ ಅಂಗವಾಗಿ ಮಜಿ ಶಾಲೆಗೆ ದಾಖಲಾದ ಎಲ್ಲಾ ಮಕ್ಕಳಿಗೂ ಹಾಗೂ ಅವರ ಪೋಷಕರಿಗೆ ಸಂಸ್ಥೆಯ ವತಿಯಿಂದ ಉಚಿತವಾಗಿ ಕೆ ಎಂ ಸಿ ಆಸ್ಪತ್ರೆಯ ರಾಯಲ್ಟಿ ಕಾರ್ಡ್ ಒದಗಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಪ್ರಜ್ಞಾಸಲಹಾ ಕೇಂದ್ರ ಮಂಗಳೂರು ಇದರ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ ರವರು, ಪ್ರಸ್ತಾವನೆಯೊಂದಿಗೆ ಆರೋಗ್ಯ ಶಿಬಿರದ ಉದ್ದೇಶವನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ,ರೋಟರಿ ಕ್ಲಬ್ ಬಿಸಿರೋಡು ಸಿಟಿ ಇದರ ಅಧ್ಯಕ್ಷರಾದ ರೊ. ಸತೀಶ್ ಕುಮಾರ್ ಕೆ ಮಾತನಾಡಿ, ಸಮುದಾಯದ ಜನರ ಉತ್ತಮ ಆರೋಗ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಉದ್ದೇಶವನ್ನಿಟ್ಟುಕೊಂಡು ಆಯೋಜಿಸುವ ಆರೋಗ್ಯ ಶಿಬಿರವು ಬಹು ಪ್ರಾಮುಖ್ಯವಾಗಿದೆ ಎಂದರು.

ಕೆಎಂಸಿ ಆಸ್ಪತ್ರೆಯ ಆರ್.ಎಂ.ಸಿ. ಸಂಯೋಜಕ ಕಾರ್ತಿಕ್ ರವರು,ಆಸ್ಪತ್ರೆಯ ರಾಯಲ್ಟಿ ಕಾರ್ಡು ಮತ್ತು ಹಸಿರು ಕಾರ್ಡ್ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಬಂಟ್ವಾಳ ಸಿಟಿ ಇದರ ಜಿ.ಎಸ್.ಆರ್. ಪದ್ಮನಾಭ ರೈ ಮಾತನಾಡಿ, ಪ್ರಸ್ತುತ ಕೊರೋನಾ ಕಾಲಘಟ್ಟದಲ್ಲಿ ಮಾಹಿತಿ ಮತ್ತು ಆರೋಗ್ಯ ಶಿಬಿರವು ತೀರಾ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಮಾತನಾಡಿ, ಗ್ರಾಮೀಣ ಮಟ್ಟದ ಜನರ ಆರೋಗ್ಯದ ಸುರಕ್ಷತೆಯ ಉದ್ದೇಶದ ಉಚಿತ ಆರೋಗ್ಯ ಶಿಬಿರಕ್ಕೆ ವೀರಕಂಭ ಗ್ರಾಮ ವನ್ನು ಆಯ್ಕೆ ಮಾಡಿರುವುದಕ್ಕೆ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಮಜಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣ ಶೆಟ್ಟಿ, ವೀರಕಂಭ ಒಕ್ಕೂಟ ಅಧ್ಯಕ್ಷ ಶ್ರೀಮತಿ ಶಾಂಭವಿ, ರೋಟರಿ ಕ್ಲಬ್ ಬಂಟ್ವಾಳ ಸಿಟಿ ಇದರ ರೊ. ಪ್ರಶಾಂತ್ ಕಾರಂತ್, ರೊ. ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು ಉಪಸ್ಥಿತರಿದ್ದರು.

ಮಜಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್. ಕೆ ಸ್ವಾಗತಿಸಿ, ಶಾಲಾ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಈಶ್ವರ ಭಟ್ ನಗ್ರಿಮೂಲೆ ವಂದಿಸಿದರು. ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಕ್ಲಬ್ ಬಿಸಿರೋಡ್ ಸಿಟಿ ಇದರ ವತಿಯಿಂದ ಶಿಬಿರದಲ್ಲಿ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿನ್ನಾ ಮೈರ ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದರು.

Advertisement
Previous Post

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮನಾದ ಕಾರ್ಕಳದ ಅಳಿಯ..!!

Next Post

(ಡಿ.10) ನರಿಮೊಗರು: ‘ಪಂಜಿಗುಡ್ಡೆ ಟ್ರೋಫಿ’ 2021

OtherNews

ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!
Featured

ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

March 11, 2026
ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!
Featured

ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

March 10, 2026
ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!
Featured

ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

March 7, 2026
ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ತನಕ ಹೋರಾಟ: ಪುತ್ತೂರಿನಲ್ಲಿ ಬಿ. ರಮಾನಾಥ ರೈ..!!
Featured

ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ತನಕ ಹೋರಾಟ: ಪುತ್ತೂರಿನಲ್ಲಿ ಬಿ. ರಮಾನಾಥ ರೈ..!!

March 1, 2026
ಬಂಟ್ವಾಳ: ಸರಗಳ್ಳತನ ಪ್ರಕರಣ: ಅನುಮಾನಿತನ ಮುಖಚಹರೆ ಪತ್ತೆ – ಸಾರ್ವಜನಿಕರ ಸಹಕಾರಕ್ಕೆ ಮನವಿ..!!
Featured

ಬಂಟ್ವಾಳ: ಸರಗಳ್ಳತನ ಪ್ರಕರಣ: ಅನುಮಾನಿತನ ಮುಖಚಹರೆ ಪತ್ತೆ – ಸಾರ್ವಜನಿಕರ ಸಹಕಾರಕ್ಕೆ ಮನವಿ..!!

February 26, 2026
ಬಿ.ಸಿ.ರೋಡು: ಪಿಕ್ ಅಪ್‌ಗೆ ವಾಹನಕ್ಕೆ ಬೈಕ್ ಡಿಕ್ಕಿ: ಸವಾರ ಮೃತ್ಯು..!!
Featured

ಬಿ.ಸಿ.ರೋಡು: ಪಿಕ್ ಅಪ್‌ಗೆ ವಾಹನಕ್ಕೆ ಬೈಕ್ ಡಿಕ್ಕಿ: ಸವಾರ ಮೃತ್ಯು..!!

February 24, 2026

Leave a Reply Cancel reply

Your email address will not be published. Required fields are marked *

Recent News

ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

March 11, 2026
ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

March 11, 2026
ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

March 11, 2026
ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

March 11, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page