ಮಂಗಳೂರು: ಗುರುಪುರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವಾಮಂಜೂರಿನ ಯೋಗೀಶ್ (31) ರವರ ಮೃತದೇಹವು ಗುರುಪುರ ಸಮೀಪದ ಬೈಲುಪೇಟೆ ಎಂಬಲ್ಲಿ ಪತ್ತೆಯಾಗಿದೆ.
ಯೋಗೀಶ್ ಬುಧವಾರ ಸಂಜೆಯಿಂದ ದಿಢೀರ್ ನಾಪತ್ತೆಯಾಗಿದ್ದು, ಗುರುವಾರ ಬೆಳಗ್ಗೆ ಗುರುಪುರ ನದಿ ಸೇತುವೆ ಪಕ್ಕ ಅವರ ಬೈಕ್ ಹಾಗೂ ಚಪ್ಪಲಿ ಪತ್ತೆಯಾಗಿತ್ತು, ಅದರಂತೆ ಅಗ್ನಿಶಾಮಕ ದಳ ಮತ್ತು ಬಜ್ಪೆ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಗುರುಪುರ ನದಿಯಲ್ಲಿ ಯೋಗೀಶ್‌ಗಾಗಿ ಗುರುವಾರ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ಆದರೆ ಶುಕ್ರವಾರ ಯೋಗೀಶ್ ಅವರ ಮೃತದೇಹವು ಬೈಲುಪೇಟೆ ಮಸೀದಿಯ ಬಳಿ ಪತ್ತೆಯಾಗಿದೆ.
ಅವಿವಾಹಿತರಾಗಿದ್ದ ಯೋಗೀಶ್ ವೃತ್ತಿಯಲ್ಲಿ ಚಾಲಕರಾಗಿದ್ದರು. ನಾಪತ್ತೆ ಕುರಿತಂತೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು.





























