ಮಂಗಳೂರು: ಮುಸ್ಲಿಂ ಹುಡುಗನನ್ನು ಹಿಂದೂ ಯುವತಿ ಮದುವೆಯಾಗಲು ಮುಂದಾಗಿದ್ದು, ಅವಳ ಮನೆಗೆ ತೆರಳಿ ಆಕೆಯನ್ನು ಎಚ್ಚರಿಸಿದ್ದೆವು. ಇದೀಗ ಮತ್ತೊಂದು ಘಟನೆ ಸಂಭವಿಸಿದ್ದು, ಬಸ್ ನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೊಬ್ಬಳು ತೆರಳಿದ್ದಾಳೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತ ಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ‘ನಾವೇ ಬೆಂಕಿಗೆ ಬೀಳುತ್ತೇವೆ ಎನ್ನುವವರಿಗೆ ಏನು ಮಾಡಲು ಸಾಧ್ಯವಿಲ್ಲ. ಆದರೆ, ಯಾವುದೇ ಕಾರಣಕ್ಕೂ ಮತಾಂತರ ಸಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ಮುಸ್ಲಿಂ ಹುಡುಗನ ಜೊತೆ ಹಿಂದೂ ಹುಡುಗಿ ಬಸ್‌ನಲ್ಲಿ ತೆರಳಿದ ವಿಚಾರವನ್ನು ಕೂಲಂಕುಷ ತನಿಖೆಗೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದೇವೆ. ಮತಾಂತರ ತಡೆ ಕಾನೂನಿನಲ್ಲಿ ಬದಲಾವಣೆ ಆಗಬೇಕು. ಈ ಕುರಿತು ಸರ್ಕಾರವನ್ನು ಒತ್ತಾಯಿಸಿದ್ದೇವೆ’. ‘ಬಾಗಲಕೋಟೆಯ ಕುಟುಂಬ ಮತಾಂತರಕ್ಕೆ ಬಲಿಯಾಗಿದೆ. ಪ್ರಕರಣದಲ್ಲಿ 2 ಮಕ್ಕಳು ಕೂಡಾ ಬಲಿಯಾಗಿದ್ದಾರೆ. ಹೀಗಾಗಿ ಮತಾಂತರ ನಿಷೇಧ ಕಾನೂನು ಜಾರಿಗೆ ಬರಬೇಕು’ ಎಂದು ವಜ್ರದೇಹಿ ಶ್ರೀಗಳು ಆಗ್ರಹಿಸಿದ್ದಾರೆ.