ದ್ವಾರಕಾ ಪ್ರತಿಷ್ಠಾನ (ರಿ.), ಪುತ್ತೂರು ಇದರ ವತಿಯಿಂದ ‘ದ್ವಾರಕಾ – ಆರ್ತ ಸಹಾಯ ಯೋಜನೆ’ಯಡಿಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುತ್ತೂರು ತಾಲೂಕು, ಪಂಚಾಯತ್ ಕಾರ್ಯಾಲಯ ಇವರ ಮುಖೇನ ಬಂದ ಮನವಿಯನ್ನು ಪರಿಗಣಿಸಿ, ಸ್ವಾವಲಂಬಿ ಜೀವನಕ್ಕಾಗಿ ಸಹಾಯ ರೂಪದಲ್ಲಿ ಹೊಲಿಗೆ ಯಂತ್ರವನ್ನು ಮರೀಲ್ ನ ಶ್ರೀ ನಾಗರಾಜ ಇವರಿಗೆ ದಿನಾಂಕ 18-05-2026ರಂದು ಹಸ್ತಾಂತರಿಸಲಾಯಿತು.
ಫಲಾನುಭವಿಯು ತೀವ್ರತರವಾದ ದೈಹಿಕ ವಿಕಲಚೇತನರಾಗಿದ್ದು, ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಯುತರಿಗೆ ಸ್ವ ಉದ್ಯೋಗವನ್ನು ಮಾಡಲು ದ್ವಾರಕಾ ಪ್ರತಿಷ್ಠಾನವು ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಿದೆ.
ಈ ಸಂದರ್ಭದಲ್ಲಿ ಫಲಾನುಭವಿಗಳನ್ನು ಸೇರಿದಂತೆ ಸಂಸ್ಥೆಯ ಇನ್ವೆಂಟರಿ ಮ್ಯಾನೇಜರ್ ಶ್ರೀ ಮೋಹನ ಮೂರ್ತಿ, ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾದ ಶ್ರೀ ದುರ್ಗಾಗಣೇಶ ಕೆ. ವಿ. ಉಪಸ್ಥಿತರಿದ್ದರು.
ಸಂಸ್ಥೆಯಿಂದ ನೀಡಿದ ಯಂತ್ರವು ಸದ್ವಿನಿಯೋಗಗೊಂಡು ಫಲಾನುಭವಿಗಳ ಮುಂದಿನ ಜೀವನವು ಸುಖಮಯವಾಗಿರಲಿ ಎಂದು ಸಂಸ್ಥೆ ಹಾರೈಸಿದೆ.



























