ಪುತ್ತೂರು: ಭಾರತೀಯ ಜೆಸಿನ ವಲಯ 15 ರ 2022 ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯು ಬಂಟ್ವಾಳ ಬಂಟರ ಭವನದಲ್ಲಿ ನಡೆಯಿತು.
ಭಾರತೀಯ ಜೆಸಿನ ವಲಯ 15 ರ ವಲಯ ಉಪಾಧ್ಯಕ್ಷರಾಗಿ ಪುತ್ತೂರಿನ ವಲಯ ಅಧ್ಯಕ್ಷೆ ಜೆಸಿ ಸ್ವಾತಿ ಜಗನಾಥ್ ಆಯ್ಕೆಯಾದರು. ಸ್ವಾತಿ ಯವರು ಭಾರಿ ಅಂತರದ ಮತದೊಂದಿಗೆ ಆಯ್ಕೆಯಾದರು.
ಸ್ವಾತಿ ಯವರು ಸದ್ಯ ಪುತ್ತೂರು ಜೆಸಿಐ ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.