ಪುತ್ತೂರು: ಬಂಡವಾಳ ರೂಪದಲ್ಲಿ ಹಣದ ವಂಚನೆ ಆರೋಪ ಕೊಂಕಣ್ ರೈಲ್ವೇ ಪಾರ್ಸೆಲ್ ಸರ್ವೀಸ್ ಅಗ್ರಿಗೇಟರ್ ಸಿನಾನ್ ವಿರುದ್ಧ ಆರಿಶ್ ಬೊಳುವಾರು ರವರು ಪುತ್ತೂರು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.ಅರಿಶ್ ಬೊಳುವಾರು ನೀಡಿದ ದೂರು ಸತ್ಯಕ್ಕೆ ದೂರವಾದದ್ದು ಎಂದು ಸಿನಾನ್ ರವರು ಪ್ರಕಟಣೆ ಯಲ್ಲಿ ತಿಳಿಸಿದ್ದು ಕಳೆದ ನಾಲ್ಕು ತಿಂಗಳ ಹಿಂದೆ ನಾನು ಮತ್ತು ಅರಿಸ್ ಬೊಳುವಾರು ಪಾಲುದಾರಿಕೆಯಲ್ಲಿ ಕೊಂಕಣ್ ರೈಲ್ವೇ ಪಾರ್ಸೆಲ್ ಸರ್ವೀಸ್ ಅಗ್ರಿಗೇಟ್ ಒಪ್ಪಂದ ಮಾಡಿದ್ದು ಇದರ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಪುತ್ತೂರಿನಿಂದ ಮುಂಬೈ ಗೆ ರೈಲ್ವೇ ಮುಖಾಂತರ ಹಾಗೂ ಮುಂಬೈ ನಿಂದ ಲಾರಿಯ ಮುಖಾಂತರ ಗುಜರಾತಿಗೆ ಸರಕು ಸಾಗಣೆ ಮಾಡಲಾಗಿದ್ದು ಒಂದು ಟ್ರಿಪ್ ಗೆ ತಲಾ 2 ಲಕ್ಷ ಕರ್ಚಾಗಿದ್ದು ಇದರಂತೆ 3 ಬಾರಿ ಸಾಗಾಟ ಮಾಡಲಾಗಿದ್ದು ಆರು ಲಕ್ಷ ಐವತ್ತು ಸಾವಿರ ಖರ್ಚು ತಗುಲಿದ್ದು ಗ್ರಾಹಕರಿಂದ 5 ಲಕ್ಷ ಸಂಗ್ರಹವಾಗಿದ್ದು ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ನಷ್ಟವಾಗಿದೆ ಈ ನಡುವೆ ಅಗ್ರಿಮೆಂಟ್ ನ ಪ್ರಕಾರ ಲಾಭ ನಷ್ಟ ಹಂಚಿಕೊಳ್ಳುವ ಪ್ರಕಾರ ನಷ್ಟ ಉಂಟಾಗಿದೆ. ಅರಿಷ್ ಬೊಳುವಾರು ಯಾವುದೇ ಮುಂಗಡ ಹಣ ನೀಡಿರುವುದಿಲ್ಲ ಅವರು ನೀಡಿರುವ ದೂರು ಸುಳ್ಳಾಗಿದೆ ಯಾವುದೇ ಸಂತ್ಯಂಶ ಇರುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.