ಉಪ್ಪಿನಂಗಡಿ: ಮಹಿಳೆಯೊಂದಿಗೆ ಪರಿಚಯಸ್ಥರ ಅಂಗಡಿಯಲ್ಲಿ ವ್ಯಕ್ತಿಯೋರ್ವ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಮಾತನಾಡುತ್ತಿದ್ದ ವ್ಯಕ್ತಿಯ ಪತ್ನಿ ಮತ್ತು ರಿಕ್ಷಾ ಚಾಲಕ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆಗೈದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿದೆ.
ಬಂಟ್ವಾಳ ತಾಲೂಕು ಬೆಂಗತ್ತೊಡಿ ಗ್ರಾಮದ ಕಾವಳ್ ಕಟ್ಟೆ ನಿವಾಸಿ ಅಬ್ದುಲ್ ರಹಿಮಾನ್(45) ದೂರುದಾರರು.
ಹಸೀನಾ ಮತ್ತು ಅಪ್ರೀದ್ ಮೇಲೆ ದೂರು ನೀಡಲಾಗಿದೆ.
ಅಬ್ದುಲ್ ರಹಿಮಾನ್ ಶಹನಾಜ್ ಎಂಬವರೊಡನೆ ಅಂಗಡಿಯೊಂದರಲ್ಲಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ರಹಿಮಾನ್ ಪತ್ನಿ ಹಸೀನಾ ಮತ್ತು ರಿಕ್ಷಾ ಚಾಲಕ ಅಪ್ರೀದ್ ಶಹನಾಜ್ ಗೆ ಅವಾಚ್ಯ ಶಬ್ದಗಳಿಂದ ಬೈದು, ಅವರ ಮೇಲೆ ಹಲ್ಲೆಗೈದು, ಇನ್ನು ಮುಂದೆ ನೀನು ಇಲ್ಲಿಗೆ ಬಂದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಅ.ಕ್ರ:159/2021 ಕಲಂ: 323,324,504,506 ಜೊತೆಗೆ 34 ಭಾದಂಸಂ ನಂತೆ ಪ್ರಕರಣ ದಾಖಲಾಗಿದೆ.