ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ದಿಗೆ ಟ್ಯೂಷನ್ ಸೆಂಟರ್ ಅತಿ ಅಗತ್ಯವಾಗಿದೆ ಎಂದು ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ಕು| ರಾಜೇಶ್ವರಿ ಕನ್ಯಾಮಂಗಲ ಅವರು ಹೇಳಿದರು.
ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಅವರು ಮಾತನಾಡಿ, ಬೆಳೆಯುತ್ತಿರುವ ಕಡಬದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಾರಂಭವಾಗಲಿರುವ ಜ್ಞಾನಸುಧಾ ಟ್ಯೂಷನ್ ಸೆಂಟರ್‌ನಿAದ ಕಡಬ ಪರಿಸರದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿ, ಎಂದು ಶುಭ ಹಾರೈಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಯವರು ಮಾತನಾಡಿದರು.
ಜ್ಞಾನ ಸುಧಾ ಸಂಸ್ಥೆಯ ಸಂಚಾಲಕ ಜನಾರ್ದನ ಬಿ.ಎಲ್, ನಿವೃತ್ತ ಮುಖ್ಯ ಶಿಕ್ಷಕ ತಮ್ಮಯ್ಯ ಗೌಡ, ಶ್ರೀ ಗಣೇಶ್ ಬಿಲ್ಡಿಂಗ್ ಮಾಲಕ ಸುಂದರ ಗೌಡ ಮಂಡೆಕರ ಶಾಖಾ ವ್ಯವಸ್ಥಾಪಕ ಕುಸುಮಾಧರ ಕಡಬ ಜೆಸಿಐನ ದಾಮೋಧರ ಪಾಟಾಲಿ, ಕಡಬ ಶಾಖಾ ಮುಖ್ಯಸ್ಥ ಕುಸುಮಾಧರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಡಬ ಪರಿಸರದಲ್ಲಿ ಹಲವಾರು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡಿದ ಶಿಕ್ಷಕ ಕಿಟ್ಟಣ್ಣ ರೈ ಅವರನ್ನು ಸನ್ಮಾನಿಸಲಾಯಿತು.