ಹೆಂಗಳೆಯರಿಗಾಗಿ ವಿಧ ವಿಧ ಶೈಲಿಯ ದಿರಿಸುಗಳು, ಸೀರೆಗಳು, ನವನವೀನ ಮಾದರಿಯ ಉಡುಪುಗಳು, ವಿಶೇಷ ವಿಭನ್ನು ವಿನ್ಯಾಸದ ಮಕ್ಕಳ ಉಡುಪುಗಳು, ಫ್ಯಾಬ್ರಿಕ್ಸ್ ಹಾಗೂ ಸ್ಟಿಚ್ಚಿಂಗ್ ಮಾದರಿಗಳು…ಇವೆಲ್ಲವೂ ಇನ್ಮುಂದೆ ಒಂದೇ ಮಳಿಗೆಯಲ್ಲಿ ಲಭ್ಯ.
ವಧುವಿಗೆ ಬೇಕಾದ ಅಂದ ಚೆಂದದ ಉಡುಪುಗಳು, ಇಂಡೋ ವೆಸ್ಟರ್ನ್ ಪಾರ್ಟಿ ವೇರ್, ಮಕ್ಕಳ ಉಡುಪುಗಳು, ಹ್ಯಾಂಡ್ ಮತ್ತು ಮೆಶಿನ್ ಎಂಬ್ರಾಯಿಡರೀ, ಬಟನ್ಸ್, ಲೇಸ್, ಸಾರಿ ಗೊಂಡೆ ಇವೆಲ್ಲವೂ ಫೈನ್ ಫ್ಯಾಬ್ರಿಕ್ಸ್ನಲ್ಲಿ ಲಭ್ಯ.
ನೂತನ ಫೈನ್ ಫ್ಯಾಬ್ರಿಕ್ಸ್ ಮಳಿಗೆಯು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಮುಂಭಾಗದಲ್ಲಿರುವ ಸೂಪರ್ ಟವರ್‌ನಲ್ಲಿ ಫೆ.೧೫ ರಂದು ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.
ಪುತ್ತೂರು ವಿಧಾÀನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ನೂತನ ಮಳಿಗೆಗೆ ಶುಭ ಚಾಲನೆ ನೀಡಲಿದ್ದು, ಟಿಎಂಸಿ ಪುತ್ತೂರು ಕಮಿಶನರ್ ರೂಪ ಟಿ ಶೆಟ್ಟಿ, ಟಿಎಂಸಿ ಪುತ್ತೂರು ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಪುತ್ತೂರು ತಾಲೂಕು ಪಂಚಾಯತ್ ಸದಸ್ಯ ಅನಿತಾ ಹೇಮನಾಥ ಶೆಟ್ಟಿ, ಜೆಡಿಎಸ್ ಹಿರಿಯ ನಾಯಕ ಎಂ ಬಿ ಸದಾಶಿವ, ಕರ್ನಾಟಕ ರಾಜ್ಯ ವಾಲಿಬಾಲ್ ಕಮಿಟೀ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ, ಪುತ್ತೂರಿನ ನೋಟರಿ ಮತ್ತು ಅಡ್ವೊಕೇಟ್ ಫಾಝುಲ್ ರಹೀಂ, ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಹೇಮನಾಥ ಶೆಟ್ಟಿ , ಅಡ್ವೊಕೇಟ್ ಮಹೇಶ್ ಕಜೆ, ಅಡ್ವೊಕೇಟ್ ಹಾಗೂ ನೋಟರಿ ನೂರುದ್ದೀನ್ ಸಾಲ್ಮರ, ಕೆವಿಜಿ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್ ಕುಮಾರ್, ಎಸ್‌ಡಿಪಿಐ ಅಧ್ಯಕ್ಷ ಅಬೂಬಕ್ಕರ್ ಸಿದ್ದಿಖ್, ಇಚ್ಚಾ ಇಂಟರ್‌ನ್ಯಾಷನಲ್ ಎಂ ಡಿ ಸಂಶುದ್ದೀನ್ ಪಿ ಎಸ್ ಮುಖ್ಯ ಅತಿಥಿಗಳಾಗಿ ಭಗವಹಿಸಲಿದ್ದಾರೆ.