ವಿಟ್ಲ: ಪಟ್ಟಣ ಪಂಚಾಯತ್ ನ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅಂಗವಾಗಿ ಇಂದು ಬಿಜೆಪಿ ಪಕ್ಷದ ಕಾರ್ಯಾಲಯದಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರುಗಳ ನೇತೃತ್ವದಲ್ಲಿ 18 ಅಭ್ಯರ್ಥಿಗಳು ಮೆರವಣಿಗೆಯ ಮೂಲಕ ಸಾಗಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿಟ್ಲದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಚುನಾವಣಾ ಪ್ರಮುಖ್ ಚಣಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಪಿಜಿ ಜಗನ್ನಿವಾಸ್ ರಾವ್, ಪ್ರಮುಖರಾದ ಬುಡಿಯಾರ್ ರಾಧಾಕೃಷ್ಣ ರೈ, ಆರ್ ಸಿ ನಾರಾಯಣ್, ಗೋಪಾಲಕೃಷ್ಣ ಹೇರಳೆ, ನಿತೀಶ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ರಾಧಾಕೃಷ್ಣ ಬೋರ್ಕರ್, ಶೈಲಜಾ ಭಟ್, ಉಷಾ ಮುಳಿಯ, ಹರಿಪ್ರಸಾದ್ ಯಾದವ್, ದಯಾನಂದ ಶೆಟ್ಟಿ, ಜಗನ್ನಾಥ ಸಾಲ್ಯಾನ್, ಶ್ರೀಕೃಷ್ಣ ವಿಟ್ಲ, ಪುನೀತ್ ಮಾಡತ್ತಾರ್, ರಾಮದಾಸ್ ಶೆಣೈ, ಮೋಹನದಾಸ್ ಉಕ್ಕುಡ,ರಾಜೇಶ್ ಕರವೀರ. ಸಹಜ್ ರೈ ಉಪಸ್ಥಿತರಿದ್ದರು.