ಮಂಗಳೂರು : ಉಪ್ಪಿನಂಗಡಿ ಠಾಣೆಯ ಎದುರು ಮಂಗಳವಾರ ಸಂಜೆ ಪಿಎಫ್ ಐ ಕಾರ್ಯಕರ್ತರ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ನಡೆದು ಪೊಲೀಸರು ಮತ್ತು ಪ್ರತಿಭಟನಾಕಾರರು ಗಾಯಗೊಂಡ ಬೆನ್ನಲ್ಲೇ ಪುತ್ತೂರು ಉಪವಿಭಾಗೀಯ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಮುಂದಿನ ಎರಡು ದಿನಗಳ ಕಾಲ ಸೆಕ್ಷನ್ 144ರನ್ವಯ ನಿಷೇದಾಜ್ಙೆ ಜಾರಿಗೊಳಿಸಿಲಾಗಿದೆ. ಪುತ್ತೂರು,ಬೆಳ್ತಂಗಡಿ,ಸುಳ್ಯ,ಕಡಬ ತಾಲೂಕಿನಾದ್ಯಂತ ನಿಷೇದಾಜ್ಙೆ ಜಾರಿಗೊಳಿಸಲಾಗಿದೆ.
ಉಪ್ಪಿನಂಗಡಿಯಲ್ಲಿ ಡಿ 14 ರಂದು ರಾತ್ರಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಮತ್ತು ಉಪವಿಭಾಗ ದಂಡಾಧಿಕಾರಿ ಡಾ. ಯತೀಶ್ ಉಳ್ಳಾಲ್ ಈ ಆದೇಶ ಹೊರಡಿಸಿದ್ದಾರೆ.
ಪುತ್ತೂರು,ಬೆಳ್ತಂಗಡಿ,ಸುಳ್ಯ, ಕಡಬ ತಾಲೂಕಿನಾದ್ಯಂತ ಡಿ.15 ರಿಂದ ದಿನಾಂಕ 17 ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸುತ್ತೇನೆ ಎಂದು ಸಹಾಯಕ ಆಯುಕ್ತರು ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
ಪುತ್ತೂರು ತಾಲೂಕಿನಾದ್ಯಂತ, ಬೆಳ್ಳಾರೆ, ಸವಣೂರು, ಬೆಳ್ತಂಗಡಿ, ಬಂಟ್ವಾಳ ಮತ್ತು ಸುಳ್ಯ ತಾಲೂಕಿನ ವ್ಯಾಪ್ತಿಯ ಪಿಎಫ್ ಐ ಕಾರ್ಯಕರು ಠಾಣೆಯ ಎದುರು ಜಮಾವಣೆ ಗೊಂಡು ಪ್ರತಿಭಟನೆ ನಡೆಸಿದ್ದು, ಮುಂದೆ ಮತ್ತೆ ಒಂದುಗೂಡುವ ಸಾಧ್ಯತೆಗಳಿದ್ದು ಈ ಹಿನ್ನಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.