ಕರ್ನಾಟಕ ರಾಜ್ಯ ರೈತ ಸಂಘದ ದ.ಕ ಜಿಲ್ಲಾಧ್ಯಕ್ಷರಾಗಿ ಬೆಳ್ತಂಗಡಿಯ ಯುವ ಉದ್ಯಮಿ ಪ್ರಶಾಂತ್ ಕೋಟ್ಯಾನ್ ಪಾದೆಗುತ್ತು ಆಯ್ಕೆಯಾಗಿದ್ದಾರೆ.
ಮೂಲತಃ ಪ್ರಗತಿಪರ ಕೃಷಿಕರಾಗಿರುವ ಪ್ರಶಾಂತ್ ಕೋಟ್ಯಾನ್ ಬೆಳ್ತಂಗಡಿಯಲ್ಲಿ ಜಶನ್ ಗ್ರೂಪ್ಸ್ ಸಂಸ್ಥೆಗಳ ಮಾಲೀಕರಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಹೋರಾಟದ ಮನೋಭಾವ ಹೊಂದಿದ್ದ ಅವರು ತಮ್ಮ ಊರಿನಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿದ್ದರು. ಯುವವಾಹಿನಿ ಬೆಳ್ತಂಗಡಿ ಘಟಕದ ಸಲಹೆಗಾರರಾಗಿದ್ದಾರೆ.
ಇಡೀ ದೇಶದಾದ್ಯಂತ ರೈತರ ಚಳವಳಿ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ರೈತ ಸಂಘದ ದ.ಕ ಜಿಲ್ಲಾಧ್ಯಕ್ಷರಾಗಿ ಯುವ ನಾಯಕರೊರ್ವ ಆಯ್ಕೆಯಾಗಿರುವುದು ರೈತ ಸಮುದಾಯಕ್ಕೆ ಹೊಸ ಸ್ಪೂರ್ತಿ ನೀಡಿದೆ.
ಬೆಳ್ತಂಗಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎನ್.ಎಸ್ ವರ್ಮ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಬ್ದುಲ್ ರಹಮಾನ್ ಕುಪ್ಪೆಟ್ಟಿ , ಸೋಮನಾಥ ಗೌಡ ಪುದುವೆಟ್ಟು , ಐತಪ್ಪ ಗೌಡ ಮಚ್ಚಿನ , ಜಯರಾಮ ಕುವೆಟ್ಟು , ವಿನಯ ಕುಮಾರ್ ಕೊಯ್ಯೂರು , ಕುಶಾಲಪ್ಪ ಗೌಡ ಪುದುವೆಟ್ಟು , ವಸಂತ ಶೆಟ್ಟಿ ಬೆಳ್ತಂಗಡಿ , ಅಣ್ಣು ಲಾಯಿಲ , ಪ್ರವೀಣ್ ಕರಿಮಣೆಲು , ಸದಾನಂದ ನಾಲ್ಕೂರು , ಕೆ. ಉಮೇಶ್ ಸಾಲ್ಯನ್ ಕಲ್ಲೇರಿ , ವಿಶ್ವನಾಥ ಪೂಜಾರಿ ಕಳಿಯ , ಸುಧೀರ್ ಗರ್ಡಾಡಿ , ಪ್ರಕಾಶ್ ಗೌಡ ಉಜಿರೆ ಉಪಸ್ಥಿತರಿದ್ದರು.