ಬಂಟ್ವಾಳ: ವ್ಯಕ್ತಿಯೋರ್ವ ತನ್ನ ಹೆಂಡತಿಯ ಮನೆಗೆ ಬಂದು ಬಲವಂತವಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದು, ಅಷ್ಟೇ ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು, ಮನೆಯ ಸೋಫಾಗೆ ಬೆಂಕಿ ಹಚ್ಚಿ, ಆಕೆಯ ಸಹೋದರನ ಮೇಲೆ ಹಲ್ಲೆಗೈದ ಘಟನೆ ಪುಣಚ ಗ್ರಾಮದ ಅರೀಪಟ್ಟೆ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಗೌಸ್ ಜಲಾಲುದ್ದೀನ್ ಎನ್ನಲಾಗಿದೆ.
ಗೌಸ್ ಜಲಾಲುದ್ದೀನ್ ಫಾತಿಮತ್ ಬುಶ್ರಾ ಎಂಬವರನ್ನು ವಿವಾಹವಾಗಿದ್ದು, ಕೆಲ ತಿಂಗಳಿನಿಂದ ಗಂಡ- ಹೆಂಡತಿ ಮದ್ಯೆ ಮನಸ್ತಾಪವಾಗಿ ಬುಶ್ರಾ ತನ್ನ ಸಹೋದರ ಮಹಮ್ಮದ್ ಕಬೀರ್ ಜೊತೆ ವಾಸವಿದ್ದರು, ಈಗಿರುವಾಗ ಡಿ.18 ರಂದು ಜಲಾಲುದ್ದೀನ್ ಮನೆಗೆ ಬಂದು ಅಕ್ಕನನ್ನು ಕಳುಹಿಸಿಕೊಡುವಂತೆ ಮಹಮ್ಮದ್ ಕಬೀರ್ ನಲ್ಲಿ ಜಗಳವಾಡಿ, ಹೆಂಡತಿಗೆ ಅವಾಚ್ಯ ಶಬ್ಧಗಳಿಂದ ಬೈದು, ಮನೆಯ ಸೋಫಾಗೆ ಬೆಂಕಿ ಹಚ್ಚಿದ್ದು, ಈ ವೇಳೆ ಆಕ್ಷೇಪಿಸಿದಾಗ ಕಬೀರ್ ನನ್ನು ದೂಡಿ ಹಾಕಿ ಹಲ್ಲೆಗೈದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ.165/2021 ಕಲಂ: 504,506,323,436 ಬಾಧಂಸಂ ಪ್ರಕರಣ ದಾಖಲಾಗಿದ್ದು, ಆರೋಪಿ ಗೌಸ್ ಜಲಾಲುದ್ದೀನ್ ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.