ವಿಟ್ಲ: ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಸಂಭ್ರಮದ ಆಚರಣೆಯಲ್ಲಿರುವ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ವಿದ್ಯಾ ಉತ್ಸವಕ್ಕೆ ತಯಾರಿ ಆರಂಭವಾಗಿದೆ.
ಈ ಸಂದರ್ಭದಲ್ಲಿ ಶಾಲಾ ಶತಮಾನೊತ್ಸವದ ಸವಿ ನೆನಪಿನ, ಶಾಲಾ ಗತ ವರ್ಷದ ಸ್ಮರಣೆಯ ‘ಸ್ಮರಣ ಸಂಚಿಕೆ’ ಹೊರ ತರಲು ಸಂಪಾದಕ ಮಂಡಳಿ ಈ ಸಂಚಿಕೆಗೆ ಉತ್ತಮವಾದ ಒಂದು ಹೆಸರನ್ನು ಸೂಚಿಸಲು ವಿನಂತಿ ಮಾಡಿದೆ.
ನಿಮ್ಮ ಆಯ್ಕೆಯ ಹೆಸರಿಗೆ ನಮ್ಮ ಸ್ವಾಗತ, ಆಯ್ಕೆಯಾದ ಹೆಸರಿಗೆ ಶತಮಾನೋತ್ಸವ ಸಂದರ್ಭದಲ್ಲಿ ಗೌರವಿಸಲು ನಾವು ಮರೆಯಲಾರೆವು. ನಿಮ್ಮ ಕಲ್ಪನೆಯ ಸಂಚಿಕೆಯ ಹೆಸರನ್ನು ವಾಟ್ಸಪ್ ನಂಬರಿಗೆ (9844847309) ಕಳಿಸಿ ಎಂದು ಸಂಪಾದಕ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.