ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಷ್ಣುಮೂರ್ತಿ ಶಾಖೆ ಮಾಣಿಲ ಮತ್ತು ಶ್ರೀ ಕ್ಷೇತ್ರ ಕುಕ್ಕಾಜೆ ಇವರ ಆಶ್ರಯದಲ್ಲಿ, ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಭೆ ಮತ್ತು ನಿವೃತ್ತ ಯೋಧರಾದ ಸಂತೋಷ್ ಕುಲಾಲ್ ಮುಡಿಪು ರವರಿಗೆ ಗೌರವಾರ್ಪಣೆ ಕಾರ್ಯಕ್ರಮ ಡಿ.19 ರಂದು ಶ್ರೀ ಕ್ಷೇತ್ರ ಕುಕ್ಕಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿಗಳಾದ ಶ್ರೀಕೃಷ್ಣ ಗುರೂಜಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾದ ಗಣೇಶ್ ಕುಮಾರ್ ದೇಲಂತಮಜಲು,ಭರತನಾಟ್ಯ ಶಿಕ್ಷಕರಾದ ಕಿರಣ್ ಉಳ್ಳಾಲ್, ವಿಷ್ಣುಮೂರ್ತಿ ಶಾಖೆ ಬಜರಂಗದಳದ ಸಂಚಾಲಕರಾದ ಉದಯ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಮಾಣಿಲದ ಅಧ್ಯಕ್ಷರಾದ ಉದಯ ನಾಯಕ್, ಎಸ್. ನಾರಾಯಣ ಮಾಣಿಲ, ಶ್ರೀಹರಿ ದಂಡೆಪ್ಪಾಡಿ, ಕೃಷ್ಣಾನಂದ ಮಾಣಿಮೂಲೆ,ಮನೀಶ್ ಕುಕ್ಕಾಜೆ, ಮಹೇಶ್ ಬಾಳೆಕಾನ, ಗಿರೀಶ್ ಕುಕ್ಕಾಜೆ, ಎಸ್.ಎಮ್. ರವಿ ಕುಕ್ಕಾಜೆ, ರಾಘವ ಆಚಾರ್ಯ, ಕಿರಣ್ ಶಂಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.